ಸಿನಿ ಸುದ್ದಿ
ಪ್ರಸಿದ್ಧ ಖಳನಟನೊಂದಿಗೆ ಜಗ್ಗೇಶ್ ಸಿಗರೇಟ್ ಶೇರ್ ಮಾಡಿದ ಫೋಟೋ ಟ್ವೀಟ್ : ಹಾಗಾದ್ರೆ ಆ ನಟ ಯಾರು?
ಸುದ್ದಿದಿನ ಡೆಸ್ಕ್ : ‘ಎದ್ದೇಳು ಮಂಜುನಾಥ ಸಿನೆಮಾ ಮೂಲಕ ‘ತನ್ನದೇ ವಿಭಿನ್ನ ಮ್ಯಾನರಿಸಂನಿಂದ ಹಾಸ್ಯದ ಹೊಸ ಮಗ್ಗುಲನ್ನು ಕಂಡು ಕೊಂಡವರು ನಟ ನವರಸ ನಾಯಕ ಜಗ್ಗೇಶ್.
ಸಿನೆಮಾ ಅಷ್ಟೇ ಅಲ್ಲ ರಾಜಕೀಯದಲ್ಲೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಜಗ್ಗೇಶ್. ಪ್ರಚಲಿತ ಆಗು- ಹೋಗುಗಳಿಗೆ ಜಗ್ಗೇಶ್ ಅವರದೊಂದು ಪ್ರತಿಕ್ರಿಯೆಯನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ. ಜತೆಗೆ ತನ್ನ ವೈಯಕ್ತಿಕವಾದ ಕುತೂಹಲ ಸಂಗತಿಗಳನ್ನು ಹಂಚಿಕೊಂಡು ಪ್ರೇಕ್ಷಕ ಪ್ರಭುವಿಗೆ ಹತ್ತಿರವಾಗುತ್ತಲೇ ಇರುತ್ತಾರೆ.
ಈಗ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಬಾಲಿವುಡ್ ನ ಖಳ ನಟ ಶಕ್ತಿ ಕಪೂರ್ ಜತೆಗೆ ಸಿಗರೇಟ್ ಹಂಚಿಕೊಂಡಿರುವ ಫೋಟೋವನ್ನ ಅಪ್ಲೋಡ್ ಮಾಡಿದ್ದಾರೆ. ನಾನು ಚೈನ್ ಸ್ಸ್ಮೋಕರ್ ಆಗಿದ್ದೆ ಒಂದು ಕಾಲದಲ್ಲಿ ಆದ್ರೆ ಈಗ ಸ್ಮೋಕ್ ಮಾಡೋಲ್ಲ ಎಂದು ಹೇಳಿಕೊಂಡಿದ್ದಾರೆ.
ಟ್ವೀಟ್ ಹೀಗಿದೆ ನೋಡಿ
2002 jan ನಲ್ಲಿ ತೆಗೆದದ್ದು ಆಗ ನಾವಿಬ್ಬರು chainsmokers..!!
ಈಗ ನಾನು smokeಮಾಡೋಲ್ಲಾ..
ಚಿತ್ರೀಕರಣ ವಿರಾಮದಲ್ಲಿ ಪತ್ರಿಕಾ ಛಾಯಾಗ್ರಾಹಕ ಮಿತ್ರ ನಾಗೇಶ್ ಕುಮಾರ್ ತೆಗದದ್ದು ಪ್ರೀತಿಯಿಂದ ಈಗ ಕಳಿಸಿದರು ಧನ್ಯವಾದಗಳು.. pic.twitter.com/iLhBhED6HP— ನವರಸನಾಯಕ ಜಗ್ಗೇಶ್ (@Jaggesh2) June 19, 2018