ದಿನದ ಸುದ್ದಿ
ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ ಮೇಲ್ದರ್ಜೆಗೆ ಕ್ರಮ : ಸಚಿವ ಅನುರಾಗ್ ಸಿಂಗ್ ಠಾಕೂರ್
ಸುದ್ದಿದಿನ ಡೆಸ್ಕ್ : ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ-ಎಫ್‌ಟಿಐಐನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಮೇಲ್ದರ್ಜೆಗೇರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಎಫ್‌ಟಿಐಐ ಸಂಸ್ಥೆಯ ಪರಿಶೀಲನಾ ಸಭೆ ನಡೆಸಿದ ಸಚಿವರು, ಸಂಸ್ಥೆಯಲ್ಲಿ ಚಲನಚಿತ್ರದ ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಬೋಧನೆಗೆ ನಿಯೋಜಿಸಲಾಗುವುದು. ವಿದೇಶಿ ವಿದ್ಯಾರ್ಥಿಗಳೂ ಸಹ ಕಲಿಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಎಫ್‌ಟಿಐಐ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದನ್ನು ಜಾಗತಿಕ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರದ ಚಲನಚಿತ್ರ ಪರಂಪರೆಯ ಸಂರಕ್ಷಣೆ ಕಾರ್ಯಕ್ರಮದಡಿ 363ಕೋಟಿ ರೂಪಾಯಿ ವೆಚ್ಚದಲ್ಲಿ 5 ಸಾವಿರದ 900ಕ್ಕೂ ಹೆಚ್ಚು ಅಪರೂಪದ ಮತ್ತು ಹಳೆಯ ಚಲನಚಿತ್ರಗಳನ್ನು ಸಂರಕ್ಷಿಸಲಾಗುತ್ತಿದೆ. ಇದು ಜಗತ್ತಿನಲ್ಲೇ ಸಿನಿಮಾ ಸಂರಕ್ಷಣೆಯ ಬೃಹತ್ ಯೋಜನೆಯಾಗಿದೆ ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ಎಫ್‌ಟಿಐಐ ಅಧ್ಯಕ್ಷ ಶೇಖರ್ ಕಪೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
The FTII Chairman @shekharkapur shared some camera tips with Union I&B Minister Sh @ianuragthakur during his interactions on campus.@FTIIOfficial pic.twitter.com/yAc74G3cUK
— Office of Mr. Anurag Thakur (@Anurag_Office) May 5, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243