ದಿನದ ಸುದ್ದಿ
ನೋಟಿಸ್ ನೀಡದೆ ನಟ ಚೇತನ್ ಬಂಧನ ; ಪೋಲಿಸರ ವಿರುದ್ಧ ಚೇತನ್ ಪತ್ನಿ ಮೇಘನ ಆರೋಪ
ಸುದ್ದಿದಿನ,ಬೆಂಗಳೂರು : ನಗರದ ಶೇಷಾದ್ರಿಪುರಂ ಪೊಲೀಸ್ ನವರು ನೋಟಿಸ್ ನೀಡದೆ ನನ್ನ ಪತಿ ನಟ ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘನಾ ಅವರು ಆರೋಪಿಸಿದ್ದಾರೆ.
ತಮ್ಮ ಪತಿಯನ್ನು ಪೊಲೀಸರು ನೋಟಿಸ್ ನೀಡದೆ ಕರೆದುಕೊಂಡು ಹೋಗಿರುವ ವಿಚಾರವಾಗಿ ನಟ ಚೇತನ್ ಪತ್ನಿ ಮೇಘನಾ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮುಂದೆ ಬಂದು ಫೇಸ್ ಬುಕ್ ಲೈವ್ ನಲ್ಲಿ ಆರೋಪ ಮಾಡಿದ್ದಾರೆ.
ಮಧ್ಯಾಹ್ನ ಮೂರು ಗಂಟೆ ಸಮಯ ನಾನು ಮನೆಯಲ್ಲಿ ಇರಲಿಲ್ಲ, ಆ ಸಮಯದಲ್ಲಿ ಪೊಲೀಸರು ಬಂದು ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ನಮ್ಮ ಮನೆಯಲ್ಲಿ ಕೆಲಸ ಮಾಡುವವರು ಪೊಲೀಸರು ಬಂದು ಚೇತನ್ ಅವರನ್ನು ಕರೆದುಕೊಂಡು ಹೋದರು ಎಂದು ಹೇಳಿದರು.
ನನಗೆ ಪೊಲೀಸರು ಉತ್ತರ ನೀಡಬೇಕು ಯಾಕೆ ಯಾವುದೇ ಮಾಹಿತಿ ನೀಡದೆ ಚೇತನ್ ಅವರನ್ನು ಕರೆದುಕೊಂಡು ಹೋದರು ಎಂದು ಹೇಳಿದರು ಜೊತೆಗೆ ಚೇತನ್ ಮತ್ತು ಅವರ ಗನ್ ಮ್ಯಾನ್ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243