ದಿನದ ಸುದ್ದಿ

ಶಾಲೆಯ ಮಕ್ಕಳಿಗೆ ಸಂವಿಧಾನದ ಪಾಠ ಮಾಡಿದ ಟಗರು ಡಾಲಿ : ವೈರಲ್ ಆಯ್ತು ವಿಡಿಯೋ..!

Published

on

ಸುದ್ದಿದಿನ ಡೆಸ್ಕ್ : ನಟ ಧನಂಜಯ ಕೇವಲ ನಟನಲ್ಲ ಅವರಲ್ಲೊಬ್ಬ ಸಾಮಾಜಿಕ ಕಳಕಳಿಯ ಹೋರಾಟಗಾರನೂ ಇದ್ದಾನೆ. ಪ್ರಸ್ತುತ ವಿದ್ಯಾಮಾಗಳಿಗೆ ತೀಕ್ಷ್ಣವಾಗಿ ಅವರು ಪ್ರತಿಕ್ರಿಯೆಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಈ ಹಿಂದೆ ಚಕ್ರವರ್ತಿ ಸೂಲೆಬೇಲಿಗೆ ‘ಮೊದಲು ಮಾನವನಾಗು’ ಎಂದು ಕೌಂಟರ್ ಕೂಡಾ ಕೊಟ್ಟಿದ್ದರು. ವಚನ ಸಾಹಿತ್ಯದ ಓದುಗ ಪ್ರೇಮಿಯಾಗಿರುವ ಧನಂಜಯ ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕ್ಕೊಂಡಿದ್ದಾರೆ ಕೂಡ.

ಜನವರಿ 26 ಮಂಗಳವಾರ ತಮ್ಮ ‘ ರತ್ನನ್ ಪರ್ಚಂಚ’ ಸಿನೆಮಾದ ಚಿತ್ರೀಕರಣದಲ್ಲಿ ಹಳ್ಳಿಯೊಂದರಲ್ಲಿ ತೊಡಗಿದ್ದ ಅವರನ್ನು ಹಳ್ಳಿಯ ಶಾಲೆಯ ಅಥಿತಿಯಾಗಿ ಶಿಕ್ಷಕರು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಹಲವು ವಿಷಯಗಳನ್ನು ಮಕ್ಕಳ ಮುಂದೆ ಹಂಚಿಕೊಂಡರು.

ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಶೆ ಪಡೆದಿದೆ.

ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ನೋಡಿ

https://www.instagram.com/tv/CKfwMNVhCuD/?igshid=q1uhfeo2o41p

https://m.facebook.com/story.php?story_fbid=259559738862856&id=100044264957540

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version