ಸಿನಿ ಸುದ್ದಿ
ನಟಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿದ ‘ಖಳನಟ ಧರ್ಮ’
ಸುದ್ದಿದಿನ ಡೆಸ್ಕ್ | ಎರಡು ತಿಂಗಳಿನಿಂದ ಸ್ಯಾಂಡಲವುಡ್ ಖಳ ನಟ ಪರಾರಿಯಾಗಿದ್ದಾನೆ.ನಟಿಸಲು ಬಂದವಳಿಗೆ ಆತ ಏನು ಮಾಡಿದ ಗೋತ್ತಾ..?ಎರಡು ತಿಂಗಳಾದ್ರು ಕೈ ಕಟ್ಟಿ ಕುಳಿತಿದ್ದಾರೆ ಪೊಲೀಸರು.
ಈ ಖಳ ನಟ ಅಶ್ಲೀಲ ವಿಡೀಯೋ ತೋರಿಸಿ ಕನ್ನಡದ ಖಳ ನಟನಿಂದ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ನಟಿಸಲು ಬನ್ನಿ ಎಂದು ಕರೆದು ಅಶ್ಲೀಲ ವಿಡೀಯೋ ಮಾಡಿರುವ ಕನ್ನಡ ಚಿತ್ರರಂಗದ ಖ್ಯಾತ ಖಳ ನಟ ಧರ್ಮನ ವಿರುದ್ದ ದೂರು ದಾಖಲಾಗಿದೆ.
ಮೂರು ತಿಂಗಳ ಹಿಂದೆ ಮಹಳೆಯೊಬ್ಬರನ್ನ ಆರ್ ಆರ್ ನಗರಕ್ಕೆ ಶೂಟಿಂಗ್ ಇದೆ ಎಂದುತನ್ನ ಕಾರು ಚಾಲಕ ನವೀನ್ ಮೂಲಕ ಕರೆಸಿಕೊಂಡಿದ್ದ ಖಳನಟ ಧರ್ಮ. ಆದ್ರೆ ಮಹಿಳೆ ಬಂದ ತಕ್ಷಣ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೋಟೇಲ್ ಗೆ ಊಟಕ್ಕೆ ಕರೆದೊಯ್ದಿದ್ದು,
ಈ ವೇಳೆ ಊಟದಲ್ಲಿ ಮತ್ತು ಬರುವ ಔಷಧಿ ಹಾಕಿ ಅಶ್ಲೀಲ ವಿಡೀಯೋ ಮಾಡಿ, ನಂತರ ಆ ವಿಡೀಯೋ ತೋರಿಸಿ ಮಹಿಳೆ ಮನೆಯವರಿಗೆ ಹೇಳುವುದಾಗಿ ಹೆದರಿಸಿ, ವಿಡಿಯೋ ತೋರಿಸಬಾರದೆಂದರೆ ಹಣ ನೀಡಬೇಕೆಂದು ಬೆದರಿಕೆ ಹಾಕಿದ್ದಾನೆ.
ಹೀಗೆ ಮಹಿಳೆಯಿಂದ 19 ಲಕ್ಷ ಹಣವನ್ನ ಮಹಿಳೆಯಿಂದ ಕಿತ್ತಿರುವ ಖಳನಟ ಧರ್ಮನ ಬೆದರಿಕೆ ಬೇಸತ್ತು ಮಹಿಳೆಯಿಂದ ಬೇಗೂರು ಠಾಣೆಗೆ ದೂರು ದಾಖಲಾಗಿದೆ. ಎರಡು ತಿಂಗಳ ಹಿಂದೆ ದೂರು ನೀಡಿದ್ದರೂ, ಇದುವರೆಗೂ ಧರ್ಮ ಹಾಗೂ ಚಾಲಕನನ್ನು ಬಂಧಿಸಲು ಪೊಲೀಸರು ಕಾರ್ಯನಿರ್ವಹಿಸಿಲ್ಲ. ಆದರೆ , ಎರಡು ತಿಂಗಳಿಂದಲೂ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401