ದಿನದ ಸುದ್ದಿ

ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್‌ ಬಂಧನ

Published

on

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ನಟ ದುನಿಯಾ ವಿಜಯ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ಕಲಾವಿದರು ಮೃತಪಟ್ಟಿದ್ದರು.ಈ ಸಂಬಂಧ ನಿರ್ಮಾಪಕ ಸುಂದರ್‌ ಪಿ.ಗೌಡ ಬಂಧನಕ್ಕೆ ತೆರಳಿದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನಟ ವಿಜಯ್ ಸಹಕರಿಸಿದ್ದರು.

ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್‌ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದರು ದುನಿಯಾ ವಿಜಯ್‌.
ದುನಿಯಾ ವಿಜಯ್‌ ಬಂಧನಕ್ಕೆ ನ್ಯಾಯಾಲಯ ವಾರೆಂಟ್‌ ಜಾರಿಗೊಳಿಸಿತ್ತು. ಕೊನೆಗೂ ತಮಿಳುನಾಡಿನಲ್ಲಿ ತಲೆಮರೆರಿಸಿಕೊಂಡಿದ್ದ ದುನಿಯಾ ವಿಜಯ್‌ ಬಂಧಸಿದ್ದಾರೆ.

ಸಂಜೆಯ ಒಳಗಡೆ ಕೋರ್ಟಿನ ಮುಂದೆ ದುನಿಯಾ ವಿಜಯ್ ರನ್ನು ಕೋರ್ಟಿಗೆ ಹಾಜರು ಪಡಿಸಲಾಗುವುದು. ಇದುಬನಾನ್ ಬೇಲಬಲ್ ಆಫೆನ್ಸ್ ಆಗಿದ್ದು, ವಿಜಯ್ ಇಷ್ಟು ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಕಾರಣ ಬೇಲ್ ಆಗಬಹುದು ಅಥವಾ ಆಗದೇ ಇರಬಹುದು. ಬೇಲ್ ಸಿಗದಿದ್ದರೆ ಪರಪ್ಪನ ಅಗ್ರಹಾರ ಗತಿಯಾಗಲಿದೆ. ಪೊಲೀಸರ ಕಾರ್ಯಕ್ಕೆ ಅಡ್ಧಿ ಪಡಿಸಿದ ಕಾರಣ ಜಾಮಿನು ಅಗುವ ಸಾದ್ಯತೆಯೂ ಕಡಿಮೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version