ಸಿನಿ ಸುದ್ದಿ

ನಟನಾಗಲು ಭಿಕ್ಷುಕರಂತೆ ಅಲೆದಾಡಿದ್ದ ಜಗ್ಗೇಶ್ : 38 ವರ್ಷದ ಹಿಂದಿನ ಕಥೆ ಇಲ್ಲಿದೆ..!

Published

on

ಲ್ಲರಂತೆ ಜಗ್ಗೇಶ್ ಸಹ ನಟರಾಗಬೇಕೆಂದು ಆಸೆ, ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಬಂದವರು. ಇಂದು ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕ, ನಿರ್ಮಾಪಕ, ವಿತರಕರಾಗಿ ಜನಪ್ರಿಯರಾಗಿರುವ ಅವರು ಸರಿಯಾಗಿ 38 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬರಲು ಭಿಕ್ಷುಕನಂತೆ ಅಲೆದಾಡಿದ್ದರು.

ಮೊನ್ನೆ ದಿನಾಂಕ 17ಕ್ಕೆ ಜಗ್ಗೇಶ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 38 ವರ್ಷ ಕಂಪ್ಲೀಟ್ ಆಯ್ತು. ಆರಂಭದಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ, ಖಳನಾಗಿ, ಹೀರೋ ಆಗಿ ಮಿಂಚಿದ್ದ ಅವರು ನಂತರ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು.

ಸದ್ಯ ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಹಳೆಯ ನೆನಪುಗಳನ್ನು ಹಾಗೂ ಅಮ್ಮನ ಪ್ರೋತ್ಸಾಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘1980 Nov 17 ‘ಮಾಯಸಂದ್ರ’ ಪಕ್ಕದ ಪುಟ್ಟ ಹಳ್ಳಿ ‘ಆನಡಗು’ ಗ್ರಾಮದ ನಂಜೇಗೌಡರ ಮೊಮ್ಮಗ ಶಿವಲಿಂಗೇಗೌಡರ ಮಗ ಈಶ್ವರಗೌಡನನ್ನು ಒಬ್ಬ BE ಪದವೀಧರನನ್ನಾಗಿ ಮಾಡಬೇಕು ಎಂದು ಬಯಸಿದ್ದರು..! ಆದರೆ ವಿಧಿಲಿಖಿತ ಬೇರೆ ಆಗಿತ್ತು..!

Trending

Exit mobile version