ಸಿನಿ ಸುದ್ದಿ

ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ : ‘ಅವನೇ ಶ್ರೀಮನ್ ನಾರಾಯಣ’ ಟೀಸರ್ ರಿಲೀಸ್

Published

on

ಸುದ್ದಿದಿನ ಡೆಸ್ಕ್ : ಚಂದನವನದ ಕ್ಯೂಟ್ ಅಂಡ್ ಟ್ಯಾಲೆಂಟೆಡ್ ಆ್ಯಕ್ಟರ್ ಕಂ ಡೈರೆಕ್ಟರ್ ರಕ್ಷಿತ್ ಶೆಟ್ಟಿ ಭರವಸೆಯ ಬೇರು. ಉಳಿದವರು ಕಂಡಂತೆ ಎಂಬ ನಾನ್ ಲೀನಿಯರ್ ನಿರೂಪಣೆಯ ಸಿನೆಮಾವನ್ನು ನೀಡಿ ಕನ್ನಡ ಅಷ್ಟೇ ಅಲ್ಲ, ಇತರ ಭಾಷೆಯ ಸಿನಿಮಾ ಮಾಂತ್ರಿಕರು ಇವರ ಒಮ್ಮೆ‌ತಿರುಗಿ ನೋಡುವಂತೆ ಮಾಡಿದವರು.

ಯುವ ನಿರ್ದೇಶಕ ಸುನಿ ಜೊತೆ‌ಸೇರಿ ಮಾಡಿದ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಸಿನಿಮಾ ಪಡ್ಡೆ ಹೈಕಳ ಎದೆದೋಚಿದಂತೂ ಮರೆಯುವಂತಿಲ್ಲ. ಹಾಗೇ ಕಿರಿಕ್ ಪಾರ್ಟಿ ಸಿನಿಮಾವೂ ಕೂಡ ಟ್ರೆಂಡ್ ಸೆಟ್ಟಿಂಗ್ ಮಾಡಿಬಿ್ಟ್ಟ್ಟಟ್ಟಿತು. ರಕ್ಷಿತ್ ಕೂಡಾ ರಷ್ಮಿಕಾ ಮಂದಣ್ಣ (ಸಾನ್ವಿ) ಜೊತೆ ಸೆಟಲ್ ಆಗ್ಬಿಟ್ರು.

ಆನಂತರ ಸಿನಿಮಾ ನಿರ್ಮಾಣ, ಚಿತ್ರಕತೆ ಮಾಡುವುದರಲ್ಲಿ ಬ್ಯುಸಿ ಇದ್ದರು. ಈಗ ರಕ್ಷಿತ್ ಶೆಟ್ಟಿ ಕನ್ನಡಿಗರ ಮನರಂಜಿಸಲು ‘ಅವನೇ ಶ್ರೀಮನ್ ನಾರಾಯಣ’ ಹಾಗೂ ‘777ಚಾರ್ಲಿ’ ಸಿನಿಮಾದಲ್ಲಿ ಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

ಇಂದು (ಜೂನ್ 06) ರಕ್ಷಿತ್ ಶೆಟ್ಟಿ‌ ಹುಟ್ಟು ಹಬ್ಬ. ಹಾಗಾಗಿ ‘ಅವನೇ ಶ್ರೀಮನ್ ನಾರಾಯಣ’ ಸಿನಿಮಾದ ಟೀಸರ್ ಬಿಡುಗಡೆ ಯಾಗಿದ್ದು, ಹಾಗೂ 777ಚಾರ್ಲಿ ಸಿನೆಮಾದ ಮಹೂರ್ತವೂ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version