ಸಿನಿ ಸುದ್ದಿ
ರೋರಿಂಗ್ ಸ್ಟಾರ್ ‘ಮದಗಜ’ ಕ್ಕೆ ಸ್ಪೆಷಲ್ ಪೂಜೆ..!
ಸುದ್ದಿದಿನ,ಮೈಸೂರು : ಮದಗಜ ಚಿತ್ರದ ಸ್ಕ್ರೀಪ್ಟ್ ಪ್ರತಿಗಳಿಗೆ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರದ ಕೆಲಸ ಆರಂಭಿಸಿದೆ ಚಿತ್ರತಂಡ.
ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಚಿತ್ರವಾಗಿದ್ದು, ಭರಾಟೆ ಚಿತ್ರದ ನಂತರ ಶ್ರೀಮುರುಳಿ ಅಭಿನಯಿಸಲಿರುವ ಹೊಸ ಚಿತ್ರವಾಗಿದೆ. ಅಯೋಗ್ಯ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶಿಸುತ್ತಿದ್ದಾರೆ ಮದಗಜ ಸಿನೆಮಾ.
ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ನಿರ್ಮಾಣದಲ್ಲಿ ಮದಗಜ ತಯಾರಾಗುತ್ತಿದ್ದು,
ನಟ ಶ್ರೀಮುರುಳಿ, ನಿರ್ದೇಶಕ, ನಿರ್ಮಾಪಕರಿಂದ ಚಾಮುಂಡಿಬೆಟ್ಟದಲ್ಲಿ ಪೂಜೆ ನಡೆಸಿದ ನಂತರ ಮೈಸೂರಿನಿಂದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಹೇಳಿದರು ಶ್ರೀಮುರುಳಿ. ಮುರುಳಿ ಜೊತೆ ಸೆಲ್ಫಿಗೆ ಮುಗಿಬಿದ್ದರು ಅಭಿಮಾನಿಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401