ದಿನದ ಸುದ್ದಿ

ಮೀಟೂ ಅಭಿಯಾನ; ಕಹಿ ಅನುಭವದ ಬಗ್ಗೆ ಹೇಳಿಕೊಂಡ್ರು ಹಿರಿಯ ಕಲಾವಿದೆ ಬಿ. ಜಯಶ್ರೀ

Published

on

ಸುದ್ದಿದಿನ ಬೆಂಗಳೂರು: ಮೀಟೂ ಅಭಿಯಾನದಲ್ಲಿ ತಮ್ಮ ಜೀವನದಲ್ಲೂ ಕೆಟ್ಟ ಅನುಭವವಾಗಿದೆ ಎಂದು ಹೇಳಿಕೊಂಡಿರುವ ಹಿರಿಯ ಕಲಾವಿದೆ ಬಿ. ಜಯಶ್ರೀ, ನನ್ನ ಕಾಲಘಟ್ಟದಲ್ಲಿ ಇದರ ಅನುಭವವಾಗಿದೆ. ಅದು ನನ್ನ ವೈಯಕ್ತಿಕ ವಿಚಾರ. ನಾನು ಹೊರಹಾಕಲು ಹೋಗುವುದಿಲ್ಲ. ನಟಿಯರು ಮೀಟೂ ಆರೋಪ ಮಾಡುತ್ತಿರುವುದು ತಪ್ಪಲ್ಲ. ಆದರೆ, ಸಾಕ್ಷ್ಯ ಒದಗಿಸುವ ದೊಡ್ಡ ಪ್ರಶ್ನೆ ಎದುರಾಗುತ್ತದೆ ಎಂದು ಹೇಳಿದರು.

ನನಗೂ ಮೀಟೂ ಅನುಭವ ಆಗಿದೆ. ಇದನ್ನು ನಾನು ಹೇಳಿಕೊಳ್ಳುವುದಿಲ್ಲ. ನಮ್ಮ ಸ್ವಾತಂತ್ರ್ಯಕ್ಕೂ ಎಲ್ಲೆ ಅದನ್ನು ಮೀರುವುದಿಲ್ಲ. ನನಗಾದ ಮೀಟೂ ಅನುಭವವನ್ನು ನನ್ನ ಆತ್ಮ ಚರಿತ್ರೆ `ಕಣ್ಣಾಮುಚ್ಚೆ ಕಾಡೇಗೂಡೆ’ಯಲ್ಲಿ ಬರೆದಿದ್ದೇನೆ. ಆ ಅನುಭವ ಘಟಿಸಿದ ಆ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರ ಇರುತ್ತದೆ. ಆ ನೋವು ನನಗಿದೆ ಎಂದು ಹೇಳಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version