ಸಿನಿ ಸುದ್ದಿ
ಬಣ್ಣದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಹರಿಪ್ರಿಯ ! ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸೋಕೆ ನಿಮ್ಮ ಡ್ರಾಯಿಂಗ್ ರೆಡಿ ನಾ ?
ಭರ್ಜರಿ ಹುಡುಗಿ ಹರಿಪ್ರಿಯ ಈಗ ಲೈಫ್ ಜೊತೆ ಸೆಲ್ಫಿ ಕ್ಲಿಕ್ಕಿಸುವ ಸಂಭ್ರಮದಲ್ಲಿದ್ದಾರೆ. ಇವರ ಬಹು ನಿರೀಕ್ಷೆಯ ಚಿತ್ರ ಲೈಫ್ ಜೊತೆ ಸೆಲ್ಫಿ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಾಣಲಿದ್ದು, ಚಿತ್ರದ ಪ್ರಮೋಷನ್ ನಲ್ಲಿ ಬಿಜಿಯಾಗಿರುವ ಹರಿಪ್ರಿಯ, ತಮ್ಮ ಕುಂಚದ ಮೂಲಕ ಚಿತ್ರದ ಪ್ರಮೋಷನ್ ಗೆ ಸಾಥ್ ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರೇಮ್ ಮುಖ್ಯ ಭೂಮಿಕೆಯಲೂಲಿದ್ದಾರೆ.
ಸಕಲಕಲಾವಲ್ಲಭೆ ಹರಿಪ್ರಿಯ
ಹರಿಪ್ರಿಯ ಕನ್ನಡ ಚಿತ್ರರಂಗದ ಕಂಡ ಅದ್ಭುತ ನಟಿ. ಕೇವಲ ನಟನೆ ಅಷ್ಟೇ ಅಲ್ಲದೆ ನೃತ್ಯ, ಸೈಕಲಿಂಗ್, ಯೋಗ,ಸಮಾಜ ಸೇವೆ ಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹೆಣ್ಣು ಮಗಳು.
ಹರಿಪ್ರಿಯ ಒಬ್ಬ ಅಧ್ಬುತ ಕುಂಚಗಾತಿ ಎಂದು ನಿರೂಪಿಸಿದ್ದಾರೆ. ಸ್ಕೆಚಿಂಗ್ ಅಲ್ಲಿ ಆಸಕ್ತಿ ಹೊಂದಿರುವ ಹರಿಪ್ರಿಯ ಲೈಫ್ ಜೊತೆ ಸೆಲ್ಫಿ ಚಿತ್ರದ ತಮ್ಮ ಪಾತ್ರ “ರಶ್ಮಿಕಾ” ಸೆಲ್ಫಿ ಕ್ಲಿಕ್ಕಿಸುವ ದೃಶ್ಯ ವನ್ನು ಬಹಳ ಸುಂದರವಾಗಿ ಸ್ಕೆಚ್ ಮಾಡಿ ಬಣ್ಣ ತುಂಬಿಸಿದ್ದಾರೆ . ಇದನ್ನು ತಮ್ಮ ಇಂಸ್ಟಾಗ್ರಾಂ ಪೋಸ್ಟ್ ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ ಹಾಗೂ ಪ್ರೇಕ್ಷಕರಲ್ಲಿ ಒಂದು ಕ್ರಿಯಾತ್ಮಕ ಸ್ಪರ್ಧೆಯನ್ನೂ ನೀಡಿದ್ದಾರೆ.ಇದರ ವಿವರ ಇಲ್ಲಿದೆ ನೋಡಿ.
ಹರಿಪ್ರಿಯ ಜೊತೆ ಸೆಲ್ಫಿ ಬೇಕಾ?
ಕುಂಚದ ಕಲಾವಿದೆ ಹರಿಪ್ರಿಯ ತಮ್ಮ ಚಿತ್ರದ ಪ್ರಮೋಷನ್ ಗಾಗಿ , ಸಿನಿ ರಸಿಕರೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ಒಂದು ಅಧ್ಬುತ ಅವಕಾಶ ನೀಡಿದ್ದಾರೆ. ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ.. ಇವರ ಸುಂದರ ಸ್ಕೆಚ್ ಗೆ ಪೈಪೋಟಿ ಎಂಬಂತೆ ನಿಮ್ಮ ಸ್ಕೆಚ್ ಗಳನ್ನು ಲೈಫ್ ಜೊತೆ ಸೆಲ್ಫಿ ಎಂಬ ಹಾಶ್ ಟ್ಯಾಗ್ ಬಳಸಿ ಇವರಿಗೆ ಇಂಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಬೇಕು. ನಿಮ್ಮ ಚಿತ್ರ ಅವರಿಗೆ ಇಷ್ಟ ವಾದಲ್ಲಿ ಸ್ಯಾಂಡಲ್ ವುಡ್ ಬೆಡಗಿ ಹರಿಪ್ರಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಬಹುದು.
ಇವರ ಪ್ರತಿಭೆ ಗೆ ಹ್ಯಾಟ್ಸ್ ಆಫ್ ಹೇಳುತ್ತಾ ಇವರ ಬಹು ನಿರೀಕ್ಷಿತ ಚಿತ್ರ ‘ಲೈಫ್ ಜೊತೆ ಸೆಲ್ಫಿ ‘ ಚಿತ್ರ ತಂಡಕ್ಕೆ ಸುದ್ದಿದಿನದ ಶುಭಾಶಯಗಳು.