ಸಿನಿ ಸುದ್ದಿ
ತನ್ನಿಷ್ಟದ ಬಟ್ಟೆ ತೊಡೋಕೆ ಯಾರಪ್ಪಣೆಯೂ ಬೇಕಿಲ್ಲ : ಕರೀನಾ ಕಪೂರ್
ಸುದ್ದಿದಿನ ಡೆಸ್ಕ್ : ಕೆಲವು ದಿನಗಳ ಹಿಂದೆ ನಟಿ ಕರೀನಾ ಕಪೂರ್ ಶಾರ್ಟ್ ಬಟ್ಟೆ ಉಟ್ಟು ಪಾರ್ಟಿಗೆ ಹಾಜರಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಒಳಗಾಗಿತ್ತು. ಮದುವೆಯಾಗಿರುವ ಕರೀನಾ ಇಂತಹ ಬಟ್ಟೆಗಳನ್ನು ತೊಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನೆಮಾಡಿದ್ದರು. ಮತ್ತವರು ಇದೇತೆರನಾದ ಬಟ್ಟೆಗಳನ್ನು ತೊಡಬೇಕು ಅಂತಲೂ ಹೇಳಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಕರೀನಾ ಕಪೂರ್ ನಾನೆಂತಹ ಬಟ್ಟೆ ತೊಡಬೇಕು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
“ಹೆಣ್ಣಿಗೆ ತನ್ನಿಷ್ಟದ ಬಟ್ಟೆ ತೊಡಬೇಕು ಎಂಬ ಆಸೆಯಿರುತ್ತೆ. ಮದುವೆಯಾಗಿ ತಾಯಿಯಾದ ಕೂಡಲೆ ಇಂತದೇ ಬಟ್ಟತೊಡಬೇಕೆಂಬ ನಿಯಮವಿಲ್ಲ. ನಮ್ಮೆಲ್ಲಾ ಆಸೆಗಳನ್ನು ಮುಚ್ಚಿಡಲು ಅಸಾಧ್ಯ. ನನ್ನ ತಾಯಿ ಈಗಲೂ ಜೀನ್ಸ್ ತೊಡುತ್ತಾರೆ. ಅದು ಅವರ ಇಷ್ಟ. ಹಾಗೇ ಅವರಿಗೆ ಆ ಬಟ್ಟೆ ಕಂಫರ್ಟ್ ಅಂದಾಗ ತೊಡುವುದರಲ್ಲಿ ತಪ್ಪೇನಿಲ್ಲ.” ಎಂದು ಸಮಜಾಯಿಷಿ ಕೊಟ್ಟಿದ್ದಾರೆ ಕರೀನಾ.