ಸಿನಿ ಸುದ್ದಿ
ನಂದಮೂರಿ ಹುಡುಕಿಕೊಂಡು ಬಂದು ಸ್ವೀಟ್ ಕೊಟ್ಟಿದ್ದರು : ನಟಿ ಲಕ್ಷ್ಮಿ
ಸುದ್ದಿದಿನ ಡೆಸ್ಕ್: ನಂದಮೂರಿ ಹರಿಕೃಷ್ಣ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿರುವ ನಟಿ ಲಕ್ಷ್ಮಿ ಅವರು ಕೊನೆಯದಾಗಿ ಅವರು ಭೇಟಿಯಾಗಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.
ಹೈದರಾಬಾದ್‍ಗೆ ಹೋದಾಗಲೆಲ್ಲಾ ನನ್ನನ್ನು ಹುಡುಕಿಕೊಂಡು ಮಾತನಾಡಿಸುತ್ತಿದ್ದರು. ಕೊನೆಯದಾಗಿ ಸ್ವೀಟ್ ಬಾಕ್ಸ್ ಹಿಡಿದು ಬಂದಿದ್ದ ಖ್ಯಾತ ನಟ ಹುಡುಕಿಕೊಂಡು ಬಂದು ನನಗೆ ತಿನ್ನಿಸಿ ಹೋಗಿದ್ದರು. ಬೆಳಗ್ಗೆ ಸುದ್ದಿ ಮಾಧ್ಯಮಗಳು ಕರೆ ಮಾಡಿ ವಿಷಯ ತಿಳಿಸಿದಾಗ ನಂಬಲು ಸಾಧ್ಯವಾಗಲಿಲ್ಲ.
ಮಗುವಿನಂತ ಮನಸ್ಸಿನ ನಂದಮೂರಿ ಅವರು ರಾಜಕಾಣಕ್ಕೆ ಸೂಟ್ ಆಗುತ್ತಿರಲಿಲ್ಲ. ರಾಜಕಾರಣ ನಿಮಗಲ್ಲ ಎಂದು ಎಷ್ಟೋ ಬಾರಿ ಹೇಳಿದ್ದೆ ಆದರೂ ಅವರಿಗೆ ಜನಸೇವೆ ಮಾಡಬೇಕೆಂಬ ಹಂಬಲ ಇತ್ತು ಎಂದು ಅವರು ತಿಳಿಸಿದ್ದಾರೆ.