ಸಿನಿ ಸುದ್ದಿ
ನಟಿ ರಮ್ಯಾ ಮತ್ತೆ ಬಿಗ್‍ಸ್ಕ್ರೀನ್ ಮೇಲೆ..!? ಟ್ವೀಟ್ ನಲ್ಲೇನಿದೆ..?
ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಗಾಂಧಿನಗರದ ಗಲ್ಲೆಬ್ಬಿಸಿತ್ತು. ಈ ವಿಚಾರವಾಗಿ ಸ್ವತಃ ರಮ್ಯಾ ಅವರೇ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಮತ್ತೆ ಬಿಗ್‍ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿಯೇ ಅವರು ಪದೇ, ಪದೇ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಮತ್ತು ಮಾಧ್ಯಮಗಳ ಮುಂದೆಯೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಸದ್ಯ ಈ ವಿಚಾರವಾಗಿ ರಮ್ಯಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನಾನು ಮತ್ತೆ ಸಿನಿಮಾ ರಂಗಕ್ಕೆ ಕಮ್‍ಬ್ಯಾಕ್ ಮಾಡುತ್ತಿದ್ದೇನೆ ಎಂಬ ಊಹಾಪೋಹಗಳು ಹರಿದಾಡುತ್ತಿರುವುದನ್ನು ಕೇಳುತ್ತಲೇ ಇದ್ದೇನೆ. ಇದರ ಬಗ್ಗೆ ವರದಿಯಾಗಿದ್ದನ್ನು ನಾನು ನೋಡಿಲ್ಲ. ನಾನು ಕಳೆದ ಕೆಲವು ತಿಂಗಳುಗಳಲ್ಲಿ ಕೆಲವು ಕುತೂಹಲಕಾರಿ ಸ್ಕ್ರಿಪ್ಟ್‌ಗಳನ್ನು ಕೇಳಿದ್ದೇನೆ. ಎಲ್ಲವೂ ಒಕೆ ಆದರೆ, ನನ್ನಿಂದ ಶೀಘ್ರದಲ್ಲಿಯೇ ಗುಡ್ ನ್ಯೂಸ್ ಕೇಳುತ್ತೀರಾ. ಅಲ್ಲಿಯವರೆಗೂ ನಿಮ್ಮ ಕುತೂಹಲ ಹೀಗೆ ಉಳಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
Hoping this will put to rest all the speculations around the ‘comeback’ film @tv9kannada @NewsFirstKan @publictvnews @SUVARNANEWS24X7 @Dighvijay24x7 @News18Kannada @prajavani @Vijaykarnataka @KannadaPrabha @udayavani_web @TOIBengaluru @BangaloreMirror @DeccanHerald pic.twitter.com/s79cVAmic9
— Divya Spandana/Ramya (@divyaspandana) February 17, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243