ಸಿನಿ ಸುದ್ದಿ
Breaking | ಶಬರಿಮಲೆಗೆ ಭೇಟಿ ನೀಡಲಿರುವ ನಟಿ ಸಂಜನಾ
ಸುದ್ದಿದಿನ ಡೆಸ್ಕ್: ಶಬರಿಮಲೆಗೆ ಹೆಣ್ಣುಮಕ್ಕಳು ಭೇಟಿ ನೀಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿರುವ ಬೆನ್ನಿಗೇ ಕನ್ನಡದ ಖ್ಯಾತ ನಟಿ ಸಂಜನಾ ಗಲ್ರಾನಿ ಅವರು ಶಬರಿಮಲೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತೀರ್ಪನ್ನು ಸ್ವಾಗತಿಸಿರುವ ಅವರು ತಮ್ಮ ಕುಟುಂಬದ ಜತೆಗೆ ಶೀಘ್ರದಲ್ಲೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ತಿರುಪತಿ, ಧರ್ಮಸ್ಥಳ ಮೊದಲಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಸದ್ಯದಲ್ಲೇ ಶಬರಿಮಲೆಗೂ ಹೋಗುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401