ದಿನದ ಸುದ್ದಿ

ನಟಿ ಸಂಜನಾ ಗಲ್ರಾನಿ ಯೋಗ ಸೆಲಬರೇಶನ್..!

Published

on

ಸುದ್ದಿದಿನ ಡೆಸ್ಕ್ : ದೇಶದಾದ್ಯಂತ ಸೋಮವಾರ 7ನೇ ವರ್ಷದ ಅಂತಾರಾಷ್ಟ್ರೀ ಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕೊರೋನಾ ಪೂರ್ವದಲ್ಲಿ ಲಕ್ಷ ಲಕ್ಷ ಮಂದಿ ಒಟ್ಟಿಗೆ ಸೇರಿ ಯೋಗಾಭ್ಯಾಸ ಮಾಡಿ ಅನೇಕ ದಾಖಲೆಗಳನ್ನು ಸಹ ಮಾಡಲಾಗಿತ್ತು.

ಆದರೆ ಕಳೆದ ವರ್ಷ ಹಾಗೂ ಈ ವರ್ಷ ಕೊರೊನಾ ಕಾರಣ,ಯೋಗ ಪ್ರಿಯರು ತಮ್ಮ ತಮ್ಮ ಮನೆಗಳಲ್ಲೇ ಈ ಬಾರಿಯ ಅಂತಾರಾಷ್ಟ್ರೀ ಯ ಯೋಗ ದಿನಾಚರಣೆ ಆಚರಿಸಿದರು. ಸಿನೆಮಾ ಸ್ಟಾರ್‌ಗಳು ಕೂಡ ಯೋಗ ದಿನಾಚರಣೆಯನ್ನು ಸೆಲೆಬ್ರೇಟ್ ಮಾಡಿ, ಶುಭಾಶಯ ತಿಳಿಸಿದ್ದಾರೆ.

ಸಿನಿಮಾ ನಟ ನಟಿಯರಿಗೆ ಪ್ರತಿಭೆ ಎಷ್ಟು ಮುಖ್ಯವೋ, ಬಾಹ್ಯ ಸೌಂದರ್ಯ ಕೂಡ ಅಷ್ಟೇ ಮುಖ್ಯ. ಹೀಗಾಗಿ ಸ್ಟಾರ್ಸ್ ದಿನಚರಿಯಲ್ಲಿ, ವರ್ಕೌಟ್ ಮತ್ತು ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡ್ತಾರೆ. ಅದರಂತೆ ನಿನ್ನೆ ಅಂತಾರಾಷ್ಟ್ರೀ ಯ ಯೋಗ ದಿನಾಚರಣೆ ಆಗಿರುವುದರಿಂದ ಚಿತ್ರರಂಗದ ಸ್ಟಾರ್‌ಗಳು ತಾವೂ ಯೋಗ ಮಾಡಿ, ಅಭಿಮಾನಿಗಳಲ್ಲೂ ಯೋಗಭ್ಯಾಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಹಳ ವಿಶೇಷವಾಗಿ ಆಚರಿಸಿದರು. ತಮ್ಮ ಯೋಗ ಗುರುಗಳೊಂದಿಗೆ ಯೋಗಾಭ್ಯಾಸ ಮಾಡುತ್ತಿರುವ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಉಸಿರಾಟದ ಸಮಸ್ಯೆಗಳಿಗೆ ಸರಳ ಯೋಗಗಳನ್ನು ಸೂಚಿಸಿದ್ದಾರೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version