ಸಿನಿ ಸುದ್ದಿ
ನಟಿ ಸಂಜನಾ ನ್ಯೂ ಲುಕ್ ; ಮಿಸ್ ಮಾಡ್ದೇ ನೋಡಿ..!
ಸುದ್ದಿದಿನ ಡೆಸ್ಕ್ : ನಟಿ ಸಂಜನಾ ಈಗ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ‘ಸ್ವರ್ಣ ಖಡ್ಗಂ’ಎಂಬ ಐತಿಹಾಸಿಕ ಕಥಾ ಹಂದರವುಳ್ಳ ಮಹಾಧಾರಾವಾಹಿಯ ವೀರಯೋಧರಾಣಿಯಾಗಿ ಅಭಿನಯಿಸಿದ್ದಾರೆ. ಹಾಗೂ ಲೇಡಿ ಪ್ರಭಾಸ್ ಎಂಬ ಬಿರುದನ್ನು ಮಾಧ್ಯಮಗಳು ಕೊಟ್ಟಿವೆ.
ಸಂಜನಾ ಬೆಂಗಳೂರಿನಲ್ಲಿ ಯೋಗ ಸೆಂಟರ್ ಕೂಡಾ ನಡೆಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನೆಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಹೊರರಾಜ್ಯದವರಾದರೂ ಕನ್ನಡದ ಭಾಷೆ, ನಾಡು,ನುಡಿಯ ಮೇಲೆ ಅಪಾರವಾದ ಪ್ರೇಮವಿರುವ ಇವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲರು.
ಅಂದಹಾಗೆ ಸಂಜನಾ ಅವರು ತಮ್ಮ ಇತ್ತೀಚಿನ ಸಿನೆಮಾ ಹಾಗೂ ಇತರೆ ಫೋಟೋಶೂಟ್‌ಗಳ ಹಲವು ಮನಮೋಹಕ ಫೋಟೋಗಳನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ನ್ಯೂ ಲುಕ್ ನಲ್ಲಿ ಸಂಜನಾ ಮುದ್ದಾಗಿ ಕಾಣ್ತಾರೆ ನೀವೂ ನೋಡಿ ಮೆಚ್ಚುಗೆ ಕೊಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401