ದಿನದ ಸುದ್ದಿ

ನೆರೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ : ಸಿಎಂ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಜನರ ಜೀವ ಹಾನಿಯಾದರೆ 5 ಲಕ್ಷ ರೂಪಾಯಿ ಪರಿಷ್ಕೃತ ದರ ನಿಗದಿಪಡಿಸಲಾಗಿದೆ. ಪ್ರವಾಹ ನೀರು ನುಗ್ಗಿರುವ ಮನೆಗಳು, ಗೃಹೋಪಯೋಗಿ ವಸ್ತುಗಳ ಹಾನಿಗೆ 10 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.

ಶೇಕಡ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಗೆ 5 ಲಕ್ಷ, ಶೇಕಡಾ 25 ರಿಂದ ಶೇಕಡಾ 75ರಷ್ಟು ತೀವ್ರ ಮನೆ ಹಾನಿಗೆ5ಲಕ್ಷ, ಶೇಕಡಾ 25 ರಿಂದ ಶೇಕಡಾ75 ರಷ್ಟು ತೀವ್ರ ಮನೆ ಹಾನಿ ದುರಸ್ತಿಗೆ 3 ಲಕ್ಷ, ಶೇಕಡಾ 15 ರಿಂದ 25ರಷ್ಟು ಭಾಗಶ: ಮನೆ ಹಾನಿಗೆ 50ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version