ಕ್ರೀಡೆ
ಇಂಗ್ಲೆಂಡ್ ನ ಈ ಕ್ರಿಕೆಟಿಗನ ದಾಖಲೆ ಕೇಳಿದರೆ ಅಚ್ಚರಿ ಪಡುತ್ತೀರಿ !
ಸುದ್ದಿದಿನ ಡೆಸ್ಕ್: ಇಂಗ್ಲೆಂಡ್ ಕ್ರಿಕೆಟ್ ಆಟಗಾರನೊಬ್ಬ ವಿಶೇಷ ವಿಶ್ವ ದಾಖಲೆಯೊಂದನ್ನು ಸಾಧಿಸಿದ್ದಾನೆ.
ಅದು ಏನು ಅಂತೀರಾ, ಇಲ್ಲಿದೆ ಓದಿ: ಲಾರ್ಡ್ಸ್
ನಲ್ಲಿ ನಡೆದ ಪಂದ್ಯದದ ಗೆಲುವಿನ ನಂತರ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ನ ಗೆಲುವಿನಲ್ಲಿ ಇಂಗ್ಲೆಂಡ್ ನ ಬಹುತೇಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಆದರೆ, ಬಲಗೈ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಯಾವುದೇ ಉತ್ತಮ ಪ್ರದರ್ಶನ ನೀಡದಿದ್ದರೂ ಹೊಸ ದಾಖಲೆ ರಚಿಸಿದ್ದಾರೆ. ಈ ಪಂದ್ಯದಲ್ಲಿ ರಶೀದ್ ಒಂದೂ ಬೌಲ್ ಮಾಡದ, ಬ್ಯಾಟಿಂಗ್ ಮಾಡದ, ರನ್ ಔಟ್ ಮಾಡದ ಇಂಗ್ಲೆಂಡ್ ನ ಮೊದಲ ಹಾಗೂ ಜಗತ್ತಿನ 14ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.