ದಿನದ ಸುದ್ದಿ

ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ ಎಲ್-1 ಸೌರಯಾನಕ್ಕೆ ಚಿಂತನೆ : ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್

Published

on

ಸುದ್ದಿದಿನ, ತಿರುವನಂತಪುರಂ : ಸೆಪ್ಟೆಂಬರ್ ಮೊದಲ ವಾರದಲ್ಲಿ ಆದಿತ್ಯ ಎಲ್-1 ಸೌರಯಾನವನ್ನು ಕೈಗೊಳ್ಳಲು ಇಸ್ರೋ ಉದ್ದೇಶಿಸಿದೆ.

ಈ ಸಂಬಂಧ ಆದಿತ್ಯಯಾನದ ಉಪಗ್ರಹವು ಈಗಾಗಲೇ ಶ್ರೀಹರಿಕೋಟಾವನ್ನು ತಲುಪಿದ್ದು, ಒಂದೆರಡು ದಿನಗಳಲ್ಲಿ ಆದಿತ್ಯಯಾನ ಉಡ್ಡಯನದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.

ತಿರುವನಂತಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿತ್ಯ ಎಲ್-1 ಉಪಗ್ರಹವು ಇಸ್ರೋದ ಮೊದಲ ಸೂರ್ಯಾಧ್ಯಯನ ಉಪಗ್ರಹ ಯೋಜನೆಯಾಗಿದೆ. ಇಸ್ರೋಗೆ ಇನ್ನೂ ಹಲವು ಅಂತರ್ ಗ್ರಹಯಾನ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಾಮರ್ಥ್ಯವಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ ಎಂದು ಸೋಮನಾಥ್ ತಿಳಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಯೋಜನೆಗಳನ್ನು ರೂಪಿಸುತ್ತಿದ್ದು, ಅವುಗಳಲ್ಲಿ ಹಲವು ಯೋಜನೆಗಳನ್ನು ಈಗಾಗಲೇ ಇಸ್ರೋ ಜಾರಿಗೊಳಿಸಿದೆ. ಇಸ್ರೋಗೆ ಸಾರ್ವಜನಿಕರ ಸಹಕಾರ ಹಾಗೂ ಪ್ರೋತ್ಸಾಹ ಹೀಗೆಯೇ ಮುಂದುವರಿಯಬೇಕೆಂದು ಮನವಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version