ದಿನದ ಸುದ್ದಿ
ಪದವಿ ಕೋರ್ಸ್‌ಗಳಿಗೆ ಪ್ರವೇಶ ; ಕಾಲಾವಧಿ ನಿಗದಿ ಮಾಡಲು ಕುಲಪತಿಗಳಿಗೆ ಯುಜಿಸಿ ಸೂಚನೆ
ಸುದ್ದಿದಿನ ಡೆಸ್ಕ್ : ದೇಶದಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಧನ ಸಹಾಯ ಆಯೋಗ – ಯುಜಿಸಿ ಪತ್ರ ಬರೆದು ಸಿಬಿಎಸ್‌ಸಿ 12ನೇ ತರಗತಿಯ ನಂತರ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಕಾಲಾವಧಿಯನ್ನು ನಿಗದಿಮಾಡುವಂತೆ ಕುಲಪತಿಗಳಿಗೆ ಸೂಚಿಸಿದೆ.
2022-23ನೇ ಸಾಲಿನ ಪದವಿಯ ಪ್ರಥಮ ವರ್ಗದ ತರಗತಿಗಳಿಗೆ ಪ್ರವೇಶ ಕಲ್ಪಿಸಲು ಕಾಲಾವಕಾಶವನ್ನು ನಿಗದಿ ಮಾಡುವುದರ ಜತೆಗೆ ಯಾವುದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ಎಲ್ಲ ರೀತಿಯ ಮುಂಜಾಗ್ರಾತಾ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸುವಂತೆ ನಿರ್ದೇಶನ ನೀಡಿದೆ.
ಸಿಬಿಎಸ್‌ಇಯ 12ನೇ ತರಗತಿಯ ಫಲಿತಾಂಶ ಪ್ರಕಟಿಸಿದ ನಂತರ ಪ್ರಥಮ ವರ್ಷದ ಪದವಿ ಪ್ರವೇಶಕ್ಕೆ ಪರೀಕ್ಷೆಗೆ ಒಂದು ತಿಂಗಳ ಕಾಲಾವಕಾಶ ನಿಗದಿ ಮಾಡುವಂತೆ ಯುಜಿಸಿ ಕುಲಪತಿಗಳಿಗೆ ಪತ್ರದಲ್ಲಿ ಉಲ್ಲೇಖಿಸಿದೆ.
UGC requests all the higher educational institutions to fix the last date of their under graduate admission process after declaration of result of class Xll by CBSE so as to provide sufficient time to such students for admission in under graduate courses. pic.twitter.com/HZFfPpEquu
— Mamidala Jagadesh Kumar (@mamidala90) July 13, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243