ದಿನದ ಸುದ್ದಿ
ಹಿಟ್ಲರ್ ಸತ್ತು ಇಂದಿಗೆ ಏಳು ದಶಕ
ಸುದ್ದಿದಿನ ವಿಶೇಷ: ಜರ್ಮನಿಯ ಸರ್ವಾಧಿಕಾರಿ ಅಡಲ್ಫ್ ಹಿಟ್ಲರ್ ಸತ್ತು ಏ.30 ಇಂದಿಗೆ 73 ವರ್ಷ. ಜನಾಂಗೀಯ ದ್ವೇಷದ ಮೂಲಕ ಜರ್ಮನಿಯನ್ನು ಆಳಿದ ಹಿಟ್ಲರ್ ಯಹೂದಿ ಸಮುದಾಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದ. ಅಷ್ಟೇ ಅಲ್ಲ ಇಡೀ ವಿಶ್ವವನ್ನು ಗೆಲ್ಲುವ ಕನಸು ಕಾಣುತ್ತಿದ್ದ ಹಿಟ್ಲರ್ ಜಗತ್ತಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಇಡೀ ಜರ್ಮನಿಯಲ್ಲಿ ಯಹೂದಿಗಳು ನರಕಯಾತನೆ ಅನುಭವಿಸಿದ್ದರು. ಜಿಲೆಟಿನ್ ಎಂಬ ಯಂತ್ರಕ್ಕೆ ಬಲಿಯಾದ ಜೀವಗಳಿಗೆ ಲೆಕ್ಕವಿರಲಿಲ್ಲ. ಇಂತಹ ಹಿಟ್ಲರ್ ಬಗೆಗೆ ಸಾವಿರಾರು ಕಥೆಗಳು ಹುಟ್ಟಿಕೊಂಡಿವೆ. ಕೆಲ ಸಿನೆಮಾಗಳಲ್ಲಿ ಕೂಡ ಅದು ಅಭಿವ್ಯಕ್ತಿಯಾಗಿದೆ.
ಭಯದ ವ್ಯಕ್ತಿ ಹಿಟ್ಲರ್
ಜಗತ್ತಿನ ನಿದ್ದೆಗೆಡಿಸಿದ್ದ ಹಿಟ್ಲರ್ ಮೂಲತಃ ಸಂಕೋಚ ಹಾಗೂ ಭಯದ ವ್ಯಕ್ತಿಯಾಗಿದ್ದನಂತೆ. ನೋಡುವುದಕ್ಕೆ ಕುಳ್ಳ ವ್ಯಕ್ತಿಯಾಗಿದ್ದ ಆತನಿಗೆ ಮೊದಲು ಜರ್ಮನಿಯ ಸೇನೆಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆತ ಎಷ್ಟು ಸಂಕೋಚ ಹಾಗೂ ಭಯದ ವ್ಯಕ್ತಿಯಾಗಿದ್ದ ಎಂಬುದನ್ನು ಚಾರ್ಲಿ ಚಾಪ್ಲಿನ್ ‘ದಿ ಡಿಕ್ಟೇಟರ್’ ಎಂಬ ಸಿನೆಮಾದಲ್ಲಿ ತೋರಿಸಿದ್ದಾರೆ. ಇಡೀ ಸಿನೆಮಾ ಅಡಲ್ಫ್ ಹಿಟ್ಲರ್ ನನ್ನು ಕೇಂದ್ರವಾಗಿಸಿಕೊಂಡಿದ್ದು, ಹಿಟ್ಲರ್ ನ ಸ್ವಭಾವವನ್ನು ಹಾಸ್ಯದ ಮೂಲಕ ಅನಾವರಣ ಮಾಡಲಾಗಿದೆ.
Read Also: ‘ಅತ್ಯಾಚಾರ’ ಮಾನವ ನಿರ್ಮಿತ ವಿಕೃತಿ
ಹಿಟ್ಲರ್ ಗೆ ಲೈಂಗಿಕ ಆಸಕ್ತಿ ಇರಲಿಲ್ಲ
ಹಿಟ್ಲರ್ ವೈಯಕ್ತಿಕ ಬದುಕಿನ ಬಗೆಗೆ ಹಲವು ವಿಶಿಷ್ಟ ಕತೆಗಳು ಹುಟ್ಟಿಕೊಂಡಿವೆ. ಹಿಟ್ಲರ್ ಗೆ ಲೈಂಗಿಕ ಆಸಕ್ತಿ ಇರಲಿಲ್ಲ. ಆತನಿಗೆ ಕೇವಲ ಒಂದು ವೃಷಣವಿತ್ತು, ಆತ ಸಲ್ಲಿಂಗಿಯಾಗಿದ್ದ ಎಂಬ ತರಹೇವಾರಿ ಕತೆಗಳು ಇವೆ. ಇತಂಹ ಹಿಟ್ಲರ್ ಸುಮಾರು ಎಂಟು ಮಹಿಳೆಯರೊಂದಿಗೆ ಸಖ್ಯ ಹೊಂದಿದ್ದ, ಆತ ರತಿಕ್ರೀಡೆ ಆಡುವಾಗು ಕೂಡ ಶಿಸ್ತು ಪಾಲಿಸುತ್ತಿದ್ದ. ಪೂರ್ತಿ ಬಟ್ಟೆ ಬಿಚ್ಚದೇ ಮಿಲನದಲ್ಲಿ ಭಾಗಿಯಾಗುತ್ತಿದ್ದ ಎಂದು ಹೇಳಲಾಗುತ್ತಿದೆ. ಆತ ಸಖ್ಯ ಹೊಂದಿದ್ದ ಮಹಿಳೆಯರು ಆತನಿಗಿಂದ ಅತಿ ಕಿರಿಯ ವಯಸ್ಸಿನವರು ಆಗಿರುತ್ತಿದ್ದರು ಎಂಬುದು ವಿಶೇಷ.
ಜಿಲೆಟಿನ್ ಯಂತ್ರ
ಭಯ ಹಾಗೂ ಸಂಕೋಚ ಸ್ವಭಾವ ಹೊಂದಿದ್ದ ಹಿಟ್ಲರ್ ನಲ್ಲಿ ಹಲವು ವಿಕೃತಿ ಮನೆ ಮಾಡಿದ್ದವು. ಲಕ್ಷಾಂತರ ಯಹೂದಿಗಳ ಮಾರಣ ಹೋಮ ನಡೆಸಿದ್ದ ಹಿಟ್ಲರ್ ಸಾವಿನ ಸಂಭ್ರಮ ಮಾಡಿದ್ದ. ಸುಮಾರು ಹತ್ತು ಸಾವಿರ ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಯಹೂದಿಗಳು ಜಿಲೆಟಿನ್ ಎಂಬ ಯಂತ್ರಕ್ಕೆ ಕೊರಳೊಡ್ಡಿದ್ದರು. ಆತನಿಂದ ತಪ್ಪಿಸಿಕೊಳ್ಳಲು ಯಹೂದಿಗಳು ಜರ್ಮನಿ ತೊರೆದು ಜಗತ್ತಿನ ನಾನಾ ದೇಶಗಳಿಗೆ ಪಲಾಯನ ಮಾಡಿದ್ದರು. ಇತಂಹ ಹಿಟ್ಲರ್ ಕೊನೆಗೆ ಒಂದು ದಿನ ಆತ್ಮಹತ್ಯೆಗೆ ಶರಣಾದ.