ದಿನದ ಸುದ್ದಿ
65 ವರ್ಷಗಳ ಸ್ನೇಹ ನೆನೆದ ಅಡ್ವಾಣಿ
ಸುದ್ದಿದಿನ ಡೆಸ್ಕ್ |ಅಟಲ್ ಜಿ ಅವರ ಸ್ನೇಹಿತನಾಗಿ ನಾನು 65 ವರ್ಷ ಕಳೆದಿದ್ದೇನೆ. ಹಾಗಾಗಿ ನಾನೇ ಅದೃಷ್ಟವಂತ ಎಂದು ಭಾವಿಸುತ್ತೇನೆ ಎಂದು ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿ. ಎ.ಬಿ. ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಅವರೊಂದಿಗೆ ಉತ್ತಮ ಸ್ನೇಹ ಇದ್ದ ಹಿನ್ನೆಲೆ ಅವರನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಒಟ್ಟಿಗೆ ಕೆಲಸ ಮಾಡಿದ್ದು, ಪರಸ್ಪರ ಅನುಭವ ವಿನಿಮಯ ಮಾಡಿಕೊಂಡಿದ್ದೇವೆ. ಒಟ್ಟೊಟ್ಟಿಗೆ ಸಿನಿಮಾ ನೋಡಿದ್ದೇವೆ, ಪುಸ್ತಕಗಳನ್ನೂ ಓದಿದ್ದೇವೆ ಎಂದರು.