ದಿನದ ಸುದ್ದಿ

ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು

Published

on

  • ಗಿರೀಶ್ ಕುಮಾರ್ ಗೌಡ

ಸುದ್ದಿದಿನ,ಹೊಸಪೇಟೆ:ನಗರದಲ್ಲಿ 2025 ಮೇ 20 ರಂದು ನಡೆಯುವ ಸಾಧನಾ ಸಂಪರ್ಕ ಸಮಾವೇಶಕ್ಕೆ ಮೇ 15 ರಿಂದಲೇ ಹೊಸಪೇಟೆ ನಗರದ ತುಂಬೆಲ್ಲಾ ರಾಜಕೀಯ ನಾಯಕರ ಜಾಹೀರಾತುಗಳ ಹಾವಳಿ ಹೆಚ್ಚಾಗಿದೆ .ಆದರೆ ಜಿಲ್ಲೆಯ ಅಧಿಕಾರಿಗಳು ಮತ್ತು ಪರಿಸರ ಅಭಿಯಂತರರು ನಿದ್ದೆಗೆ ಜಾರಿರುವ ದುರ್ಘಟನೆ ನಡೆದಿದೆ.

ನಗರದ ಟಿ.ಬಿ ಡ್ಯಾಂ ರಸ್ತೆಯ ಉದ್ದಕ್ಕೂ ವಿಜಯನಗರ ಕ್ಷೇತ್ರದ ಶಾಸಕ ಹೆಚ್.ಆರ್. ಗವಿಯಪ್ಪ ಅವರು ದೊಡ್ಡ ಗಾತ್ರದ ಬ್ಯಾನರ್ ಗಳನ್ನು ಹಾಕಿಕೊಂಡು ನಗರ ಅಭಿವೃದ್ಧಿ ಮಾಡದೇ ಶೋಕಿ ಮಾಡಿಕೊಂಡು ಕೈಮುಗಿದು ಬ್ಯಾನರ್ ಹಾಕಿಕೊಂಡಿದ್ದು ದುರಂತ ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.

ಇನ್ನು ಯಾವುದೇ ನಗರಸಭೆಯಿಂದ ಅನುಮತಿಯನ್ನು ಪಡೆಯದೆ ಇರೋದ್ ಸಹ ದುರಂತವಾಗಿದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ರಾಜಕೀಯ ವ್ಯಕ್ತಿಗಳಿಗೆ ಒಂದು ಕಾನೂನು ಮಾಡಿದ್ದು ಜಿಲ್ಲಾಧಿಕಾರಿಗಳಿಗೆ ಹಾಗೂ ಪರಿಸರ ಅಭಿಯಂತರರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ಬ್ಯಾನರ್ ನಲ್ಲಿ ಸಚಿವ ಸಂತೋಷ ಲಾಡ್ ಇಲ್ಲ

ಕರ್ನಾಟಕದಲ್ಲಿ ಸಚಿವ ಸಂತೋಷ ಲಾಡ್ ಪೋಟೋ ಬ್ಯಾನರ್ ನಲ್ಲಿ ಇಲ್ಲದೆ ಇರೋದ್ ಸಹ ದುರಂತ. ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಏನೇ ಸಮಸ್ಯೆ ಬಂದರೂ ಮೊದಲು ಹೋಗೋದು ಸಚಿವ ಸಂತೋಷ್ ಲಾಡ್ ಆದರೆ ಸಾಧನಾ ಸಂಪರ್ಕ ಸಮಾವೇಶದ ಶಾಸಕ ಗವಿಯಪ್ಪ ಅವರ ಬ್ಯಾನರ್ ನಲ್ಲಿ ಸಂತೋಷ ಲಾಡ್ ಕಾಣದೇ ಇರೋದು ದುರಂತವಾಗಿದೆ.

I Don’t know Sir ಎಂದ ಆರತಿ ಪರಿಸರ ಅಭಿಯಂತರರು

ಇನ್ನು ಸಮಾವೇಶದ ಅಂಗವಾಗಿ ನಗರದಲ್ಲಿ ಹಾಕಿದ ಬ್ಯಾನರ್ ಗಳ ಬಗ್ಗೆ ಪರಿಸರ ಅಭಿಯಂತರರಾದ ಆರತಿ ಅವರಿಗೆ ಆರಂಭದಲ್ಲಿ ಪೋನ್ ಕರೆ ಮಾಡಿದರೆ ಸ್ವೀಕರಿಸಲಿಲ್ಲ, ವ್ಯಾಟ್ಸಾಪ್ ಮೂಲಕ ಸಂದೇಶ ಕಳಿಸಿದರೇ I Don’t know Sir ಎಂದು ಸಂದೇಶ ಕಳಿಸಿದ್ದಾರೆ‌. ಇನ್ನು ಈ ವಿಚಾರವಾಗಿ ತಹಶಿಲ್ದಾರರಾದ ಶೃತಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಇನ್ನಿತರ ಅಧಿಕಾರಿಗಳು ಮೌನರಾಗಿದ್ದು ಏಕೆ ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು.

ಸಂಜೆ ಕರೆ ಮಾಡಿದರೆ 250 ಕ್ಕೆ ಗವಿಯಪ್ಪ ಅವರು ಅನುಮತಿಗೆ ಕಳಿಸಿದ್ದಾರೆ ನಂತರ ಅವರ ಯಾವುದೇ ದಾಖಲೆಗಳನ್ನು ಪತ್ರಿಕೆಗೆ ಕಳಿಸಲಿಲ್ಲದೇ ಇರೋದ್ ಸಹ ದುರಂತ. ಬಹಳ ಸುಳ್ಳು ಹೇಳುವ ಅಧಿಕಾರಿ ಆರತಿ.

ಇನ್ನು ಸಿಎಂ ಮತ್ತು ಡಿಸಿಎಂ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪುಟ್ ಪಾಥ್ ಮೇಲೆ ಇದ್ದ ಅಂಗಡಿಗಳು, ಹೋಟೆಲ್ ಗಳು, ಬಂಡಿಗಳನ್ನು, ಆಟೋ ನಿಲ್ದಾಣದಲ್ಲಿ ಇದ್ದ ಆಟೋಗಳನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version