ದಿನದ ಸುದ್ದಿ

ಶಾಕಿಂಗ್ ನ್ಯೂಸ್ | ಕೊರೋನಾ ನಂತರ ದೇಶಕ್ಕೆ ಎದುರಾಯ್ತು ಮತ್ತೊಂದು ಗಂಡಾಂತರ : ಅಸ್ಸಾಂ ಗೆ ಎಂಟ್ರಿ ಕೊಟ್ಟಿದೆ ‘ಆಫ್ರಿಕನ್ ಹಂದಿಜ್ವರ’..!

Published

on

ಸುದ್ದಿದಿನ,ಗುವಾಹಟಿ : ಆಫ್ರಿಕನ್ ಹಂದಿ ಜ್ವರ ರಾಜ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಮತ್ತು ಇದು ಈಗಾಗಲೇ 306 ಹಳ್ಳಿಗಳಲ್ಲಿ ಸುಮಾರು 2,500 ಹಂದಿಗಳು ಬಲಿಯಾಗಿವೆ ಎಂದು ಭಾನುವಾರ ಅಸ್ಸಾಂ ಸರ್ಕಾರ ತಿಳಿಸಿದೆ.

ಸೋಂಕಿತ ಹಂದಿಗಳನ್ನು ಕೊಲ್ಲಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸೂಚನೆ ನೀಡಿದ್ದು , ಹೆಚ್ಚು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿದೆ ಎಂದು ಅಸ್ಸಾಂ ಪಶುಸಂಗೋಪನೆ ಮತ್ತು ಪಶುವೈದ್ಯ ಸಚಿವ ಅತುಲ್ ಬೋರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕಾಯಿಲೆಗೆ COVID-19 ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಅವರು, “ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಎಸ್ಡಿ) ಇದು ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಎಂದು ದೃಡಪಡಿಸಿದೆ. ಇದು ದೇಶದಲ್ಲಿ ಮೊದಲ ಪ್ರಕರಣ ಎಂದು ಕೇಂದ್ರ ಸರ್ಕಾರ ನಮಗೆ ತಿಳಿಸಿದೆ” ಎಂದು ಬೋರಾ ಹೇಳಿದ್ದಾರೆ.

ಇಲಾಖೆಯ 2019 ರ ಜನಗಣತಿಯ ಪ್ರಕಾರ, ಹಂದಿ ಜನಸಂಖ್ಯೆ 21 ಲಕ್ಷ, ಆದರೆ ಇತ್ತೀಚಿನ ದಿನಗಳಲ್ಲಿ ಇದು ಸುಮಾರು 30 ಲಕ್ಷಕ್ಕೆ ಏರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version