ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಪ್ರಮುಖ ಸುದ್ದಿಗಳು

  1. ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
  2. ಹರಿಯಾಣದಲ್ಲಿಂದು ವಿವಿಧ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ, ಮಹೇಂದ್ರಗರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಹರಿಯಾಣದ ಸಿರ್‍ಸಾದಲ್ಲಿ ರೋಡ್ ಶೋ ನಡೆಸಿದರು.
  3. ಸಂತಾಲಿ ಲೇಖಕ ಪಂಡಿತ್ ರಘುನಾಥ್ ಮುರ್ಮು ಅವರ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ ಅವರು, ಓಲ್ ಚಿಕಿ ಲಿಪಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸಂತಾಲಿ ಭಾಷೆಗೆ ಪಂಡಿತ್ ರಘುನಾಥ್ ಮುರ್ಮು ಹೊಸ ಗುರುತು ನೀಡಿದ್ದಾರೆ ಎಂದು ಹೇಳಿದರು.
  4. ಭಗವಾನ್ ಬುದ್ಧನ ಜನ್ಮದಿನದ ಅಂಗವಾಗಿ ಬುದ್ಧ ಪೂರ್ಣಿಮೆಯನ್ನು ಪ್ರಪಂಚದಾದ್ಯಂತ ವಿವಿಧ ಭಾಗಗಳಲ್ಲಿ ಇಂದು ಆಚರಿಸಲಾಗುತ್ತಿದೆ. ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಇದು ಪ್ರಮುಖ ಹಬ್ಬವಾಗಿದೆ.
  5. ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. ಚುನಾವಣೆ ಘೋಷಣೆಯಾಗುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ನಿರೀಕ್ಷೆಗಿಂತ ಹಲವಾರು ತಿಂಗಳುಗಳ ಮುಂಚಿತವಾಗಿಯೇ ರಾಷ್ಟ್ರೀಯ ಚುನಾವಣೆಯನ್ನು ಕರೆದಿದ್ದಾರೆ.
  6. ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.
  7. ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ 2ನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲನೇ ಕ್ವಾಲಿಫೈಯರ್ ಪಂದ್ಯ ಸೋತ ಹೈದರಾಬಾದ್ ತಂಡದೊಂದಿಗೆ ಫೈನಲ್ ಪ್ರವೇಶಿಸಲು ಸೆಣಸಾಟ ನಡೆಸಲಿದೆ.
  8. ಇಂದು ಬುದ್ಧ ಪೌರ್ಣಿಮೆಯನ್ನು, ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಕರುಣೆ ಮತ್ತು ಶಾಂತಿಯ ಮಂತ್ರವನ್ನು ಸಾರಿದ ಮಹಾಪುರುಷ ಗೌತಮ ಬುದ್ಧನನ್ನು ನೆನೆಯುತ್ತಾ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
  9. ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಒಟ್ಟು 8 ಲಕ್ಷದ 98 ಸಾವಿರ ಕ್ವಿಂಟಾಲ್ ಬೀಜಗಳ ಪೂರೈಕೆಗೆ, ವ್ಯವಸ್ಥೆ ಮಾಡಲಾಗಿದೆ ಎಂದು, ಸಾಮಾಜಿಕ ಜಾಲತಾಣದಲ್ಲಿ, ಕೃಷಿ ಖಾತೆ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
  10. ಗದಗ ಹಾಗೂ ಹಾವೇರಿ ಜಿಲ್ಲೆಗಳ ವ್ಯಾಪ್ತಿಯ, ವಿವಿಧ ಗ್ರಾಮಗಳಿಗೆ, ಕುಡಿಯುವ ನೀರು ಪೂರೈಸಲು, ಭದ್ರಾ ಜಲಾಶಯದಿಂದ, ತುಂಗಭದ್ರಾ ನದಿಗೆ, ಇದೇ 28ರ ವರೆಗೆ ಪ್ರತಿ ದಿನ, 2 ಸಾವಿರ ಕ್ಯುಸೆಕ್‌ಗಳಂತೆ ಒಟ್ಟು, 11 ಸಾವಿರದ 574 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು, ಭದ್ರಾ ಯೋಜನಾ ವೃತ್ತದ, ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
  11. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡ ಬಳ್ಳಾಪುರದ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ, ದ್ರೌಪದಿದೇವಿ ಕರಗ ಮಹೋತ್ಸವ, ಇಂದು ರಾತ್ರಿ ಜರುಗಲಿದೆ.
  12. ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 42 ಅಂಕ ಏರಿಕೆಯೊಂದಿಗೆ 74 ಸಾವಿರದ 263 ರಲ್ಲಿ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ 20 ಅಂಕ ಏರಿಕೆಯ ನಂತರ 22 ಸಾವಿರದ 618 ರಲ್ಲಿ ವಹಿವಾಟು ನಡೆಸಿದೆ.
  13. ಬೆಲ್ಜಿಯಂನ ಆಂಟ್‌ವರ್ಪ್ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version