ದಿನದ ಸುದ್ದಿ
ಅಗ್ನಿಪಥ್’ ಒಂದು ಪರಿವರ್ತನಾ ಯೋಜನೆ; ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಇಂಡಿಯಾ ಯೋಜನೆ : ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಹರಿಕುಮಾರ್
ಸುದ್ದಿದಿನ ಡೆಸ್ಕ್ : ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಯುವಕರು ಹಿಂಸಾಚಾರದಲ್ಲಿ ತೊಡಗಿ ರೈಲ್ವೆ ಆಸ್ತಿ-ಪಾಸ್ತಿಗಳನ್ನು ಹಾನಿ ಮಾಡದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಅಗ್ನಿಪಥ್ ಯೋಜನೆಯ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯ ವೇಳೆ ಯುವಕರು ರೈಲ್ವೆಯ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ರೈಲ್ವೆ ಆಸ್ತಿ-ಪಾಸ್ತಿ ದೇಶದ್ದಾಗಿದ್ದು, ರಾಷ್ಟ್ರಕ್ಕೆ ಉತ್ತಮ ಸೇವೆ ಒದಗಿಸುತ್ತಿದೆ. ಕೇಂದ್ರ ಸರ್ಕಾರ ಸಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಯು ಒಂದು ಪರಿವರ್ತನಾ ಯೋಜನೆಯಾಗಿದೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಹೇಳಿದ್ದಾರೆ. ಈ ಯೋಜನೆಯು ಮೇಡ್ ಇನ್ ಇಂಡಿಯಾ ಮತ್ತು ಮೇಡ್ ಫಾರ್ ಇಂಡಿಯಾ ಯೋಜನೆಯಾಗಿದೆ.
ಹಾಗಾಗಿ, ಪ್ರತಿಭಟನಾಕಾರರನ್ನು ಶಾಂತಿಯುತವಾಗಿ ಇರುವಂತೆ ನೌಕಾಪಡೆ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಅಗ್ನಿಪಥ್ ಯೋಜನೆಯು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಒಂದು ಉತ್ತಮ ಅವಕಾಶವಾಗಿದೆ. ಹಾಗಾಗಿ ಇದನ್ನು ಓದಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಆರಂಭಿಕ ಯೋಜನಾ ತಂಡದ ಭಾಗವಾಗಿ ಸುಮಾರು ಒಂದೂವರೆ ವರ್ಷಗಳ ಕಾಲದ ಪರಿಶ್ರಮದ ಬಳಿಕ ಈ ಯೋಜನೆಯು ಪೂರ್ಣಗೊಂಡು ಸಶಸ್ತ್ರ ಪಡೆಗಳಲ್ಲಿ ಪರಿಚಯವಾಗುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ಸೇನೆಯಲ್ಲಿ ಇದು ಏಕೈಕ ಅತಿದೊಡ್ಡ ಮಾನವ ಸಂಪನ್ಮೂಲ ನಿರ್ವಹಣೆ ರೂಪಾಂತರವಾಗಿದೆ ಎಂದು ತಿಳಿಸಿದ ಅಡ್ಮಿರಲ್ ಹರಿ ಕುಮಾರ್, ಯೋಜನೆಯ ಬಗೆಗಿನ ತಪ್ಪು ಮಾಹಿತಿ ಮತ್ತು ತಪ್ಪು ತಿಳವಳಿಕೆಯಿಂದಾಗಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳಿದರು.
Chief of Defence staff likhdo ab https://t.co/zVA2OZrUAF
— Panther🇮🇳 (@Panther7112) June 17, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243