ದಿನದ ಸುದ್ದಿ
ಎಎಚ್-64ಇ ಅಪಾಚೆ ಹೆಲಿಕಾಪ್ಟರ್
ಸುದ್ದಿದಿನ ಡೆಸ್ಕ್ : ದಾಳಿ ನಡೆಸುವ ಸಾಮರ್ಥ್ಯವೂ ಸೇರಿ ಬಹೂಪಯೋಗಿಯಾದ ಆರು ಎಎಚ್-64ಇ ಅಪಾಚೆ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ಪೂರೈಸುವ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದ್ದು, ಅನುಮೋದನೆಗಾಗಿ ಕಾಂಗ್ರೆಸ್ಗೆ (ಸಂಸತ್) ಕಳುಹಿಸಲಿದೆ.
ಈ ಒಪ್ಪಂದದ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ತಮ್ಮ ಸಹವರ್ತಿಗಳಾದ ಮೈಕ್ ಪೊಂಪೇ ಮತ್ತು ಜೇಮ್್ಸ ಮಾಟಿಸ್ ಜತೆ ಮುಂದಿನ ತಿಂಗಳು ಚರ್ಚೆ ನಡೆಸಲಿದ್ದಾರೆ. ತದ ನಂತರ ಈ ಪ್ರಸ್ತಾವ ಅಮೆರಿಕ ಕಾಂಗ್ರೆಸ್ ಮುಂದೆ ಬರಲಿದೆ.
ಅಮೆರಿಕದ ಬೋಯಿಂಗ್ ಮತ್ತು ಭಾರತದ ಟಾಟಾ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ ಹೆಲಿಕಾಪ್ಟರ್ನ ಕವಚ ತಯಾರಿಕೆ ಮತ್ತು ಜೋಡಣೆ ಭಾರತದ ಘಟಕದಲ್ಲಿ ಆಗಬೇಕಿತ್ತು. ಆದರೀಗ ಅಮೆರಿಕ ಸಂಪೂರ್ಣವಾಗಿ ಸಿದ್ಧಗೊಂಡ ಹೆಲಿಕಾಪ್ಟರ್ಗಳನ್ನೇ ಪೂರೈಸಲು ಸಮ್ಮತಿಸಿದೆ.
ಇದೇ ಮಾದರಿಯ ಅಪಾಚೆ ಹೆಲಿಕಾಪ್ಟರ್ಗಳನ್ನು ಗ್ರೀಸ್, ಜಪಾನ್, ಇಸ್ರೇಲ್, ನೆದರ್ಲೆಂಡ್, ಸಿಂಗಾಪುರ, ಯುಎಇ, ಬ್ರಿಟನ್ಗಳು ಬಳಸುತ್ತಿವೆ. ಅಮೆರಿಕದ ಎಎಚ್-64ಇ ಅಪಾಚೆ ಹೆಲಿಕಾಪ್ಟರ್ಗಳು ಪನಾಮ, ಪರ್ಷಿಯನ್ ಕೊಲ್ಲಿ, ಕೊಸೊವೊ, ಅಫ್ಘಾನಿಸ್ತಾನ, ಇರಾಕ್, ಲೆಬನಾನ್, ಗಾಜಾಪಟ್ಟಿಯಲ್ಲಿ ಸಂಘರ್ಷ ಉಂಟಾದಾಗ ಬಳಕೆಯಾಗಿದೆ.
ನಿರ್ಮಾಣ ಗುತ್ತಿಗೆ ಯಾರಿಗೆ?
ಈ ಹೆಲಿಕಾಪ್ಟರ್ ನಿರ್ವಣದ ಗುತ್ತಿಗೆಯನ್ನು ಲಾಕ್ಹೀದ್ ಮಾರ್ಟಿನ್, ಜನರಲ್ ಇಲೆಕ್ಟ್ರಾನಿಕ್ಸ್ ಮತ್ತು ರೇಥಿಯೋನ್ ಕಂಪನಿಗಳು ಪಡೆದುಕೊಂಡಿವೆ.
ಭಾರತಕ್ಕೇನು ಲಾಭ?
ಭಾರತೀಯ ಸೇನೆಯ ಬಲ ವೃದ್ಧಿ, ದೇಶದೊಳಗೆ ಮತ್ತು ಪ್ರಾದೇಶಿಕ ವ್ಯಾಪ್ತಿಯಲ್ಲಿ ಎದುರಾಗುವ ಬೆದರಿಕೆಯನ್ನು ಈ ಹೆಲಿಕಾಪ್ಟರ್ ಮೂಲಕ ಹೋಗಲಾಡಿಸಿಕೊಳ್ಳಬಹುದು.
ಹೆಲಿಕಾಪ್ಟರ್ ವಿಶೇಷವೇನು?
* ಎರಡು ಟರ್ಬೋಶಾಫ್ಟ್
* ಎರಡು ಗಾಲಿಗಳು
* ಟ್ಯಾಂಡಮ್ ಕಾಕ್ಪಿಟ್, ಇಬ್ಬರು ಪೈಲಟ್ ಕೂರಲು * ಅವಕಾಶ
* ಹೆಲಿಕಾಪ್ಟರ್ನ ಮುಂಭಾಗದ ತುದಿಯಲ್ಲಿ (ನೋಸ್) ಸೆನ್ಸಾರ್ ಸಾಧನ
ಹೆಲಿಕಾಪ್ಟರ್ನಲ್ಲಿ ಏನಿರಲಿದೆ?
ಬೆಂಕಿ ನಿರೋಧಕ ರಾಡರ್ಗಳು ರಾತ್ರಿ ಸಮಯದಲ್ಲಿ ಸ್ಪಷ್ಟ ವೀಕ್ಷಣೆಗೆ ಅನುಕೂಲವಾಗುವ ಸೆನ್ಸಾರ್ ದಿಕ್ಸೂಚಿ ನೀಡುವ ಜಿಪಿಎಸ್ ದಾಳಿ ತಡೆಯುವ ಸುರಕ್ಷಾ ಕವಚ
ಗಗನದಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ (ಬ್ಲಾಕ್ ಐ-92ಎಚ್) ಹೆಲ್ಫೈರ್ ಲಾಂಗ್ಬೋ ಕ್ಷಿಪಣಿ ಹೈಡ್ರಾ ರಾಕೆಟ್ಗಳು.