ದಿನದ ಸುದ್ದಿ
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ಅಭಿನಂದನೆ
ಸುದ್ದಿದಿನ ಡೆಸ್ಕ್ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjuna Kharge ) ಇಂದು ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಸರ್ವೋದಯ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ವರಿಷ್ಠರು ಗೌರವಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸ್ವಯಂ ಶಕ್ತಿಯಿಂದ ಕೆಲಸ ಮಾಡಿದಾಗ ಎಲ್ಲರೂ ಗುರುತಿಸುತ್ತಾರೆ. ಗುರಿ ಇಟ್ಟು ಶ್ರಮಿಸಿದ್ದಲ್ಲಿ, ತಾನಾಗಿಯೇ ಅವಕಾಶ ಲಭ್ಯವಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಿಂದ ದೇಶದ ಪ್ರಜಾಪ್ರಭುತ್ವ ಸಂರಕ್ಷಣೆಯಾಗಿದೆ. ಎಲ್ಲ ವರ್ಗದವರೂ ಪ್ರಮುಖ ಸ್ಥಾನ ಹೊಂದಲು ಕಾಂಗ್ರೆಸ್ ಪಕ್ಷ ನೀಡಿರುವ ಸಂವಿಧಾನವೇ ಸಾಕ್ಷಿ ಎಂದು ಮಲ್ಲಿಕಾರ್ಜುನ ಖರ್ಗೆ ಪಕ್ಷದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮಹಾತ್ಮಗಾಂಧಿ ಪ್ರಾರಂಭಿಸಿದ ಸರ್ವೋದಯ ಹೋರಾಟ ಹಾಗೂ ಧ್ವನಿಯ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಾಸವಿಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಇಂದು ಅಭಿನಂದಿಸುವ ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶವೆಂದು ಹೆಸರಿಟ್ಟಿರುವುದಾಗಿ ಹೇಳಿದರು.
ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಕಾಂಗ್ರೆಸ್ ತ್ರಿವರ್ಣ ಆಶ್ರಯದಲ್ಲಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದೇವೆ ಎಂದು ಅವರು ಹೇಳಿದರು. ಖರ್ಗೆ ಅವರು ಅಧಿಕಾರ ಹುಡುಕಾಡಿಕೊಂಡು ಹೊಂದವರಲ್ಲ, ಅವರ ತ್ಯಾಗ ಗುಣದಿಂದ ಈ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ಹಿರಿಯ ಪದಾಧಿಕಾರಿಗಳು, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಹೊಂದಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
. @INCIndia ಅಧ್ಯಕ್ಷನಾಗಿ ಮೊದಲ ಬಾರಿ ಇಂದು ನನ್ನ ತವರು ನೆಲಕ್ಕೆ ಬಂದಿದ್ದೇನೆ,
ಸರ್ವೋದಯ ಸಮಾವೇಶದ ಮೂಲಕ ಬಹು ಅದ್ದೂರಿಯಾಗಿ ನನ್ನನ್ನು ಸ್ವಾಗತಿಸಿದ ಸರ್ವರಿಗೂ ನಾನು ಆಭಾರಿಯಾಗಿದ್ದೇನೆ.
ಪಕ್ಷವನ್ನು ಬಲಗೊಳಿಸಲು, ದೇಶವನ್ನು ಸೌಹಾರ್ದಯುತವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ
1/2 pic.twitter.com/wbmSHz3iqC— Mallikarjun Kharge (@kharge) November 6, 2022
ಸರ್ವೋದಯ ಸಮಾವೇಶವನ್ನು ರೂಪಿಸಿದ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರಿಗೆ, ರಾಜ್ಯ ಉಸ್ತುವಾರಿಗಳಾದ @rssurjewala ಅವರಿಗೆ, ಸಿಎಲ್ಪಿ ನಾಯಕರಾದ @siddaramaiah ಅವರಿಗೆ, ಎಲ್ಲಾ ಕಾರ್ಯಾಧ್ಯಕ್ಷರುಗಳಿಗೆ, ಪಕ್ಷದ ಎಲ್ಲಾ ಹಿರಿ, ಕಿರಿಯ ನಾಯಕರಿಗೆ, ಮುಖಂಡರಿಗೆ, ವಿಶೇಷವಾಗಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದ ಹೇಳಬಯಸುತ್ತೇನೆ. pic.twitter.com/ocyNA3XGz0
— Mallikarjun Kharge (@kharge) November 6, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243