ದಿನದ ಸುದ್ದಿ
ದೊಡ್ಡ ಬಾತಿ ಪ್ರೇರಣಾ ಸಂಸ್ಥೆಯಲ್ಲಿ ‘ವಿಶ್ವ ಏಡ್ಸ್ ದಿನಾಚರಣೆ’
ಸುದ್ದಿದಿನ, ದಾವಣಗೆರೆ : ದಾವಣಗೆರೆ ಸಮೀಪದ ದೊಡ್ಡ ಬಾತಿ ಗ್ರಾಮದಲ್ಲಿ ವಿಶ್ವಗುರು ಭಾರತ ಪ್ರತಿಷ್ಠಾನ(ರಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದಲ್ಲಿ ದಿನಾಂಕ : 10-12-2020 ರಂದು ಬೆಳಿಗ್ಗೆ 10.30 ಕ್ಕೆ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅತಿಥಿಯಾಗಿ ಆಗಮಿಸಿದ ದಾವಣಗೆರೆ D.T.O ಗಂಗಾಧರ್ ಅವರು HIV ಬಗ್ಗೆ ಮಾಹಿತಿ ಹಾಗೂ ತಿಳುವಳಿಕೆ ನೀಡಿದರು.
ದುಶ್ಟಟ ಹಾಗೂ ದುರ್ಮಾರ್ಗಕ್ಕೆ ವಶವಾಗದೆ ಜೀವನದಲ್ಲಿ ಉತ್ತಮ ಸಂಸ್ಕಾರಗಳಲ್ಲಿ ತೊಡಗಿ ಸಮಾಜದ ಏಳ್ಗೆಗೆ ಸಹಕಾರಿಯಾಗುವಂತಹ ಸಾಧನೆ ಮಾಡಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ D.T.O ನಟರಾಜ್, ದಾವಣಗೆರೆ D.S.Dapco ದ ಪ್ರದೀಪ್, ಸಂಜೀವಿನಿ ನೆಟ್ವರ್ಕ ಅಧ್ಯಕ್ಷರಾದ ಲಿಂಗಣ್ಣ ಗೌಡರು, ಸಂಸ್ಥೆಯ ಪ್ರೋತ್ಸಾಹಕರಾದ ಅನಿತಾ ದಂಪತಿಗಳು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಮೇಗಳಮನಿ, ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಹೊಸಮನಿ ಉಪಸ್ಥಿತರಿದ್ದರು.
ಪ್ರೇರಣಾ ಸಂಸ್ಥೆಯ ಮತ್ತು ಸಂಜೀವಿನಿ ನೆಟ್ವರ್ಕ್ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243