ದಿನದ ಸುದ್ದಿ
ವಿಜಯನಗರ | ಹೊಸಪೇಟೆಯಲ್ಲಿ ಶೇ.50ರಷ್ಟು ಏಡ್ಸ್ ರೋಗಿಗಳು ಪತ್ತೆ
ಸುದ್ದಿದಿನ,ವಿಜಯನಗರ:ಜಿಲ್ಲೆಯ ಒಟ್ಟು ಎಚ್‌ಐವಿ ರೋಗಿಗಳಲ್ಲಿ ಶೇಕಡ 50ರಷ್ಟು ಹೊಸಪೇಟೆಯಲ್ಲಿಯೇ ಪತ್ತೆಯಾಗಿದ್ದು, ಅದರಲ್ಲೂ ಯುವಕರು ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಿರುವುದು ಕಳವಳಕಾರಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಂಕರ್ ನಾಯಕ್ ಹೇಳಿದ್ದಾರೆ.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಬಳ್ಳಾರಿ, ವಿಜಯನಗರ ಹಾಗೂ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಇಂದು ಬೆಳಿಗ್ಗೆ ಜರುಗಿದ ಯುವಜನೋತ್ಸವ 2024-25ರ ರೆಡ್ ರಿಬ್ಬನ್ ರನ್ ಸ್ಪರ್ಧೆಯ ಮ್ಯಾರಥಾನ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243