ದಿನದ ಸುದ್ದಿ
ಏರ್ ಏಷ್ಯಾ ಸಿಇಒ ವಿರುದ್ಧ ಸಿಬಿಐ ಕೇಸ್
ಸುದ್ದಿದಿನ ಡೆಸ್ಕ್: ಏರ್ ಏಷ್ಯಾ ಸಿಇಒ ಟೋನಿ ಫರ್ನಾಂಡೀಸ್ ಹಾಗೂ ಕಂಪನಿಯ ಇನ್ನಿತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ಅನುಮತಿ ಪಡೆಯುವ ಸಲುವಾಗಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ, ಕಂಪನಿಯ ಸಿಇಒ ಟೋನಿ ಫರ್ನಾಂಡಿಸ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಮಾನಯಾನ ಕಾಯ್ದೆ 5/20 ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪ್ರಾರಂಭಿಸಲು ಐದು ವರ್ಷಗಳ ಅನುಭವ ಹಾಗೂ ಇಪ್ಪತ್ತು ವಿಮಾನಗಳನ್ನು ಹೊಂದಿರಬೇಕು. ಆದರೆ ಇದ್ಯಾವ ಅರ್ಹತೆ ಇಲ್ಲದಿದ್ದರೂ ಸಂಸ್ಥೆಯು ಅನುಮತಿ ಪಡೆದಿದೆ. ತನ್ನ ವ್ಯವಹಾರಕ್ಕೆ ಅಡ್ಡಿಯಾಗಿದ್ದ ಈ ಕಾನೂನನ್ನು ತೆಗೆದುಹಾಕುವಂತೆ ಪಟ್ಟುಹಿಡಿದಿತ್ತು.