ದಿನದ ಸುದ್ದಿ

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ; ದೆಹಲಿಯಲ್ಲಿ 562 ಪ್ರಕರಣ ದಾಖಲು

Published

on

ಸುದ್ದಿದಿನ ದೆಹಲಿ: ವಾಯು ಮಾಲಿನ್ಯ ಹೆಚ್ಚುತ್ತಿರುವ ಮಹಾನಗರಗಳಲ್ಲಿ ಈ ಬಾರಿ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಈ ಸುಪ್ರೀಂ ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಹಾರಿಸಿದವರ ವಿರುದ್ಧ ದೆಹಲಿವೊಂದರಲ್ಲೇ 562 ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 310 ಜನರನ್ನು ಬಂಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಬಿಗಿ ಕಾನೂನು ಜಾರಿ ಮಾಡಿತ್ತು. ಪಟಾಕಿ ಹೊಡೆಯುವುದಕ್ಕೆ ಸಮಯ ನಿಗದಿ, ಕಡಿಮೆ ಪ್ರಮಾಣದ ಶಬ್ದ ಬರುವ ಪಟಾಕಿ ಸಿಡಿಸಬೇಕು ಎಂಬಾತ್ಯದಿ ನಿಯಮ ಜಾರಿಗೊಳಿಸಿತ್ತು. ಕೆಲವು ಇದನ್ನು ಮೀರಿ ಪಟಾಕಿ ಹಚ್ಚಿದ್ದಕ್ಕೆ ಸುಪ್ರೀಂ ಕೋರ್ಟ್ ತಕ್ಕಶಾಸ್ತಿ ಮಾಡಿದೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್ ದೀಪಾವಳಿ ಹಬ್ಬದ ದಿನದಂದು ರಾತ್ರಿ 8ರಿಂದ 10 ರವರೆಗೆ ಮಾತ್ರ ಪರಿಸರ ಸ್ನೇಹಿ ಪಟಾಕಿ ಹಚ್ಚಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಆದೇಶ ಪಾಲಿಸದೇ ಪಟಾಕಿ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶ ( ಐಪಿಸಿ ಸೆಕ್ಷನ್ 188) ಉಲ್ಲಂಘನೆಯ ಆರೋಪದಡಿ ದೆಹಲಿವೊಂದರಲ್ಲೇ 562 ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 310 ಜನರನ್ನು ಬಂಧಿಸಲಾಗಿದೆ.

ದೆಹಲಿ ವಾತಾವರಣದ ಗಾಳಿಯ ಗುಣಮಟ್ಟ ಕುಸಿತಗೊಂಡಿದೆ. ಇದರ ಸಮತೋಲನ ಮಾಡಲು ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ವಿವಿಧ ನಿಯಮ ರೂಪಿಸಿ ಆದೇಶಿಸಿತ್ತು. ಅದರಲ್ಲೂ ದೀಪಾವಳಿ ಹಬ್ಬದ ಎರಡು ಗಾಳಿಯ ಗುಣಮಟ್ಟ ತೀರ ಕಡಿಮೆ ಆಗಿದ್ದು, ಗುರುವಾರ ಟ್ರಕ್‌ಗಳ ದೆಹಲಿ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಆದರೆ, ಮೂಲಸೌಕರ್ಯ ಪೂರೈಸುವ ವಾಹನಗಳಿಗೆ ವಿನಾಯಕ ನೀಡಲಾಗಿತ್ತು.

ದೆಹಲಿಯ ಸಮೀಪದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಐಪಿಸಿ ಸೆಕ್ಷನ್ 188ರಡಿ 58 ಪ್ರಕರಣ ದಾಖಲಾಗಿವೆ. ಚತ್ತೀಸಗಡದಲ್ಲಿ ವಿಧಿಸಿದ್ದ ಮಿತಿ ಮೀರಿ ಪಟಾಕಿ ಸಿಡಿಸಿದ 34 ಜನರನ್ನು ಬಂಧಿಸಲಾಗಿದೆ. ಅಸ್ಸಾಂನಲ್ಲಿ 150, ಕಲ್ಕತ್ತಾದಲ್ಲಿ 306ಜನರನ್ನು ಬಂಧಿಸಲಾಗಿದೆ.

ಪಂಜಾಬ್, ಹರಿಯಾಣ ರಾಜ್ಯದಲ್ಲಿ ವಾಯು ಮಾಲಿನ್ಯ ತೀವ್ರವಾಗಿದ್ದು, ಕಳೆದ ದೀಪಾವಳಿದ ವೇಳೆಗಿಂತ ವಾತಾವರಣ ತೀರ ಹದಗೆಟ್ಟಿದೆ.

Trending

Exit mobile version