ದಿನದ ಸುದ್ದಿ
ವಿಡಿಯೊ | ಏರ್ ಶೋ ವೇಳೆ ಅಗ್ನಿ ಅವಘಡ : 300 ಕ್ಕೂ ಹೆಚ್ಚು ಕಾರುಗಳು ಭಸ್ಮ..!
ಸುದ್ದಿದಿನ, ಬೆಂಗಳೂರು : ಏರೋ ಇಂಡಿಯಾ 2019ರ ಏರ್ ಶೋ ವೇಳೆ ಮತ್ತೆ ಅಗ್ನಿ ಅವಘಢ ಸಂಭವಿಸಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದ್ದು, ಏರ್ ಪೋರ್ಸ್ ರಸ್ತೆಯ ಗೇಟ್ ನಂಬರ್ 5ರ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ತಗುಲಿದ ಕಾರಣ ಏರ್ ಶೋ ನ ಕಾರ್ ಪಾರ್ಕಿಂಗ್ ನಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ.
ಈ ಏರೋ ಇಂಡಿಯಾ ಶೋನಲ್ಲಿ ಶನಿವಾರ (ಇಂದು ಫೆ23) ಸಾರ್ವಜನಿಕರಿಗಾಗಿಯೇ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಏರೋ ಶೋನಾ ಗೇಟ್ ನಂ.5ರಲ್ಲಿ ಸಾರ್ವಜನಿಕರಿಗೆ ಕಾರು ಪಾರ್ಕಿಂಗ್ ಮಾಡುವ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದು ಬಯಲು ಪ್ರದೇಶವಾಗಿದ್ದು ಇಲ್ಲಿನ ಹುಲ್ಲಿಗೆ ಬೆಂಕಿ ತಗುಲಿ ಸಾರ್ವಜನಿಕರು ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹತ್ತಿ ಅವಘಡ ಸಂಭವಿಸಿದೆ.
ಬೆಂಕಿ ತಗುಲಿದ ಪರಿಣಾಮ ದುಬಾರಿ ಬೆಲೆಯ 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಬೂದಿಯಾಗಿವೆ. ಆದರೆ ಯಾವುದೆದ ಪ್ರಾಣಾಪಾಯ ಸಂಭವಿಸಿಲ್ಲ.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401