ದಿನದ ಸುದ್ದಿ
ಬೆಳಗಾವಿಯಲ್ಲಿ ಏರ್‌ಬಸ್ ಗೆ ಅದ್ದೂರಿ ಸ್ವಾಗತ; ರನ್ ವೇ ನಂತ್ರ ಮೊದಲ ಬಾರಿಗೆ ಬಂದ ವಿಮಾನ
ಸುದ್ದಿದಿನ ಡೆಸ್ಕ್: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಮೊದಲ ಬಾರಿಗೆ ಆಗಮಿಸಿದ ವಿಮಾನವೊಂದನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಹಾಗಂತ ಇದೇ ಮೊದಲ ಬಾರಿಗೆ ವಿಮಾನ ಬಂದಿದೆ ಅಂತಲ್ಲ. ಇದಕ್ಕೂ ಮೊದಲು ಅನೇಕ ಬಾರಿ ವಿಮಾನ ಪ್ರಯಾಣಿಕರ ಹೊತ್ತು ಬಂದಿದೆ. ಆದರೆ, ಇದು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ನಂತರ ಪ್ರಥಮ ಬಾರಿಗೆ ಆಗಮಿಸಿದ್ದು ಅಧಿಕಾರಿಗಳಿಗೆ ಸಡಗರಕ್ಕೆ ಕಾರಣವಾಗಿತ್ತು.
ಬೆಂಗಳೂರಿನಿಂದ ಬೆಳಗಾವಿಗೆ ಬಂದ ವಿಮಾನದಲ್ಲಿ 110 ಪ್ರಯಾಣಿಕರಿದ್ದರು. 140 ಪ್ರಯಾಣಿಕರ ಸಾಮರ್ಥ್ಯದ ಏರ್‌ಬಸ್ ವಾರದ ಏಳು ದಿನವೂ ಬೆಳಗಾವಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಹಾರಾಡಲಿದೆ. ಬೆಳಗಾವಿಯ ಪ್ರಯಾಣಿಕರು ವಿಮಾನಯಾನಕ್ಕಾಗಿ ಹುಬ್ಬಳ್ಳಿಗೆ ಹೋಗುವುದು ತಪ್ಪಿದಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401