ದಿನದ ಸುದ್ದಿ

ಅಕ್ಟೋಬರ್ 1ಕ್ಕೆ ಏರ್ ಇಂಡಿಯಾಗೆ ಎಳ್ಳು ನೀರು

Published

on

ಸದ್ದಿದಿನ ಡೆಸ್ಕ್: ಖಾಸಗಿ ವೈಮಾನಿಕ ಸಂಸ್ಥೆಗಳ ದರ ಸಮರದಿಂದ ತ್ತರರಿಸಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಮುಚ್ಚಲು ಅಕ್ಟೋಬರ್ 1ಕ್ಕೆ ದಿನಾಂಕ ಗೊತ್ತಾಗಿದೆ.
ಸುಪ್ರಿಂ ಕೋರ್ಟ್ ಆದೇಶದಂತೆ ನಿಗದಿತ ದಿನಾಂಕದಂದು ಕಂಪನಿಯನ್ನು ಮುಚ್ಚಲಾಗುತ್ತಿದ್ದು, ಸಿಬ್ಬಂದಿ ವರ್ಗ ಇದಕ್ಕೆ ಸಹಕರಿಸುವಂತೆ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ನಷ್ಟಕ್ಕೆ ಒಳಗಾಗಿರುವ ಸಂಸ್ಥೆಯು ತನ್ನ ವಿಮಾನಗಳನ್ನು ಆಪರೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರವು ಏರ್ ಇಂಡಿಯಾಗಾಗುತ್ತಿರುವ ಹೊಣೆ ಹೊರುತ್ತಿದ್ದು, ಕಂಪನಿಯ ನಷ್ಟವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಸಂಸ್ಥೆಯ ಉದ್ಯೋಗಿಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಸಿಬ್ಬಂದಿ ತಮ್ಮ ಭವಿಷ್ಯದ ದೃಷ್ಟಿಯಿಂದ ಬೇರೆ ಕಡೆ ಕೆಲಸ ಹುಡುಕಿಕೊಳ್ಳುವಂತೆ ಸಂಸ್ಥೆಯ ಮುಖ್ಯ ವ್ಯವಸ್ಥಾಪಕಿ ಮೀಕಾಕ್ಷಿ ಕಶ್ಯಪ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version