ದಿನದ ಸುದ್ದಿ

ಕಿಕಿ ಡ್ಯಾನ್ಸ್ ಆಯ್ತು ಈಗ ಸೂಜಿಗೆ ದಾರ ಪೋಣಿಸೋ ಚಾಲೆಂಜ್

Published

on

ಸುದ್ದಿದಿನ ಡೆಸ್ಕ್: ಯುವಕರನ್ನು ಹುಚ್ಚೆಬ್ಬಿಸಿದ ಕಿಕಿ ಡ್ಯಾನ್ಸ್ ನಂತರ ಈಗ ಸೂಜಿಗೆ ದಾರ ಪೋಣಿಸುವ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೊಡ್ಡ ದೊಡ್ಡ ನಟರು ಈ ಚಾಲೆಂಜ್‍ನಲ್ಲಿ ಸೋತಿದ್ದಾರೆ.

ಹಿಂದಿಯಲ್ಲಿ ಸುಯೀ ಧಾಗಾ ಹೆಸರಿನ ಈ ಚಾಲೆಂಜ್ ಸವೀಕರಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹತ್ತು ಸೆಕೆಂಡ್‍ಗಳಲ್ಲಿ ಸೂಜಿಗೆ ದಾರ ಪೋಣಿಸುವ ಸವಾಲಿನಲ್ಲಿ ಸೊತಿದ್ದಾರೆ. ಫಿಲ್ಮ್ ಫೇರ್ ಸಂಪಾದಕ ಜಿತೇಶ್ ಸಬ್ಬಾದಿಯಾ ಅವರೂ ಕೂಡ ಈ ಸವಾಲು ಸ್ವೀಕರಿಸಿದ್ದರು. ಲಖನೌನಲ್ಲಿ ಕೆಲವು ಆರ್‍ಜೆಗಳಿಗೆ ನಟ ವರುಣ್ ಧವನ್ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಈ ಸವಾಲು ನೀಡಿದ್ದರು.

https://twitter.com/akshaykumar/status/1041910604070576128
ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಜೋಡಿಯ ಸುಯಿ ಧಾಗಾ ಸಿನಿಮಾ ಇನ್ನೇನು ಬಿಡುಗಡೆಯಾಗಲಿದ್ದು. ಈ ಚಿತ್ರದಲ್ಲಿ ವರುಣ್ ಅವರು ಟೈಲರ್ ಪಾತ್ರ ನಿರ್ವಹಿಸಲಿದ್ದಾರೆ. ಲೇಡೀಸ್ ಟೈಲರ್‍ವೊಬ್ಬ ತನ್ನ ವೃತ್ತಿಯಲ್ಲಿ ಹೇಗೆ ಮುಂದೆಬರುತ್ತಾನೆ ಎಂಬ ಅಂಶವನ್ನು ಇಟ್ಟುಕೊಂಡು ಈ ಸಿನಿಮಾ ಚಿತ್ರಿಸಲಾಗಿದೆ.
ಸಿನಿಮಾದ ಪ್ರಮೋಶನ್‍ಗಾಗಿ ಚಿತ್ರತಂಡವು ಸುಯಿ ಧಾಗಾ ಚಾಲೆಂಜ್ ನೀಡುತ್ತಿದೆ. ಹತ್ತು ಸೆಕೆಂಡ್‍ಗಳಲ್ಲಿ ಸೂಜಿಯೊಳಗೆ ದಾರ ಪೋಣಿಸುವುದೇ ಈ ಸವಾಲು. ನಟ ಅಕ್ಷನ್ ಕುಮಾರ್ ಅವರು ಮೊದಲ ಹತ್ತು ಸೆಕೆಂಡ್‍ನಲ್ಲಿ ಸೂಜಿಯ ಕಣ್ಣಿನೊಳಗೆ ದಾರ ಪೋಣಿಸಲು ಹೋಗಿ ಅದ ಸಾಧ್ಯವಾಗದಿದ್ದಾಗ ಇನ್ನೂ ಹತ್ತು ಸೆಕೆಂಡ್ ಪಡೆದು ಅದರಲ್ಲೂ ಸೋತರು. ಈ ವಿಡಿಯೊವನ್ನು ಅಕ್ಷಯ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವರುಣ್ ಹಾಗೂ ಅನುಷ್ಕಾ ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಮಾಡಲಿ ಎಂದು ಹರಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version