ದಿನದ ಸುದ್ದಿ
ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರ ರಕ್ಷಣೆ
ಬೆಂಗಳೂರಿನ ಮತ್ತಿಕೆರೆಯ ಗೋಕುಲ್ ಎಕ್ಸ್ ಟೆನ್ಷನ್‍ನಲ್ಲಿ ಕಾಣಿಸಿಕೊಂಡಿದ್ದ ಆಲ್ಬಿನೊ ಸ್ನೇಕ್ ಅರ್ಥಾತ್ ಬಿಳಿ ನಾಗರವನ್ನು ಹಾವುಗಳ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಿಡಿದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಮತ್ತಿಕೆರೆಯ ಗೋಕುಲ್ ಎಕ್ಸ್ ಟೆನ್ಷನ್‍ನಲ್ಲಿ ಕಾಣಿಸಿಕೊಂಡಿದ್ದ ಆಲ್ಬಿನೊ ಸ್ನೇಕ್ ಅರ್ಥಾತ್ ಬಿಳಿ ನಾಗರವನ್ನು ಹಾವುಗಳ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಿಡಿದು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಬಿಳಿ ನಾಗರ ಸಂತತಿಯು ಭಾರತದಲ್ಲಿ ತುಂಬ ವಿರಳ. ಇದುವರೆಗೂ ಕೇವಲ ಎಂಟು ಬಿಳಿ ನಾಗರಹಾವುಗಳು ಮತ್ರ ದೇಶದಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಬೆಂಗಳೂರಿನಲ್ಲಿ ಬಿಳಿ ನಾಗರ ಕಾಣಿಸಿಕೊಂಡಿರುವುದು ಇದೇ ಮೊದಲು.
ಸಂರಕ್ಷಿಸಲ್ಪಟ್ಟಿರುವ ಹಾವು ಜನ್ಮ ತಾಳಿ ಏಳು ದಿನಗಳಾಗಿರಬಹುದು ಎಂದು ರಾಜೇಶ್ ಕುಮಾರ್ ಅಂದಾಜಿಸಿದ್ದಾರೆ.
ಮತ್ತಿಕೆರೆಯ ಗೋಕುಲ್ ಎಕ್ಸ್ ಟೆನ್ಷನ್‍ನಿಂದ ಕರೆ ಬಂತು ಇದು ಸಾಮಾನ್ಯ ನಾಗರಹಾವಾಗಿರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅಲ್ಲಿ ಹೋಗಿ ನೋಡಿದಾಗ ಬಿಳಿ ಮೈ ಬಣ್ಣ , ಕೆಂಪು ಕಣ್ಣಿನ ಅಪರೂಪದ ನಾಗರ ನೋಡಿ ಅಚ್ಚರಿಯಾಯಿತು. ದೇಶದಲ್ಲಿ ಇದುವರೆಗೆ ಎಂಟು ಆಲ್ಬಿನೊ ನಾಗರ ಹಾವುಗಳು ಕಾಣಿಸಿಕೊಂಡಿವೆ. ಸಂರಕ್ಷಿಸಲ್ಪಟ್ಟ ಹಾವು ಕಾಲು ಅಡಿ ಎತ್ತರ ಇತ್ತು. ಅದಕ್ಕೆ ಹೊಂದಾಣಿಕೆಯಾಗುವ ಪರಿಸರದಲ್ಲಿ ಹಾವನ್ನು ಬಿಡಲಾಯಿತು ಎಂದು ಅವರು ತಿಳಿಸಿದ್ದಾರೆ.