ದಿನದ ಸುದ್ದಿ
ಮದ್ಯಪ್ರಿಯ ನಾಯಿಗಳು : ಮೂರು ವರ್ಷದ ಮಗುವಿನ ಮೇಲೆ ದಾಳಿ
ಸುದ್ದಿದಿನ, ಹಾಸನ : ಬೀದಿಶ್ವಾನಗಳು ಮದ್ಯಪ್ರಿಯ ಶ್ವಾನಗಳಾಗಿವಿಯೇ? ಖಂಡಿತವಾಗಿಯೂ ಹೌದು. ಬಾರ್, ಡಾಬಾ,ಮದ್ಯದ ಅಂಗಡಿ, ರಿಂಗ್ ರಸ್ತೆಗಳ ಬಳಿಯೇ ಠಿಕಾಣಿ ಹೂಡಿ,ಅಲ್ಲಿ ಕುಡಿದು ಎಸೆದ ಮದ್ಯದ ಬಾಟಲಿ,ಪ್ಲಾಸ್ಡಿಕ್ ಲೋಟವನ್ನೇ ನೆಕ್ಕಿ ಮತ್ತು ಬರೆಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿವೆ.ಹೀಗಾಗಿ ಕಳೆದ ಒಂದು ವರ್ಷದಿಂದ ಮೂರು ಸಾವಿರ ಮಕ್ಕಳು ಮತ್ತು ವಯಸ್ಕರರಿಗೆ ನಾಯಿಗಳು ಕಚ್ಚಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ ಪ್ರಕರಣಕ್ಕೆ ಚಿಕಿತ್ಸೆ ನೀಡಲು ಪ್ರತ್ಯೇಕ ವಿಭಾಗ ತೆರೆಯಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401