ದಿನದ ಸುದ್ದಿ

ದೇಶದ ಎಲ್ಲ ಪಂಚಾಯತ್‌ಗಳು ಭೂ-ಆಧಾರ್‌ನೊಂದಿಗೆ ಸಂಯೋಜನೆ : ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದೆಹಲಿ : ದೇಶದ ಎಲ್ಲ ಪಂಚಾಯತ್‌ಗಳನ್ನು ಭೂ-ಆಧಾರ್‌ನೊಂದಿಗೆ ಸಂಯೋಜಿಸಲಾಗುವುದು. ಈ ವರ್ಷದ ಅಂತ್ಯಕ್ಕೆ ಸರ್‌ಪಂಚ್‌ಗಳಿಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಪಂಚಾಯತ್ ರಾಜ್‌ನ ವಿಶಿಷ್ಟ ಸಪ್ತಾಹದಡಿ ಉತ್ತಮ ಆಡಳಿತ ಕುರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಮಿತ್ವ ಯೋಜನೆಗೆ ಕೇಂದ್ರ ಸರ್ಕಾರ 21 ರಾಜ್ಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಭೂ-ಆಧಾರ್ ವ್ಯವಸ್ಥೆ ಪೂರ್ಣಗೊಂಡ ನಂತರ ಜನರು ಪ್ರಯೋಜನ ಪಡೆಯಲಿದ್ದಾರೆ. ಈ ವ್ಯವಸ್ಥೆಯು ನಕಲಿ ಭೂಮಾಲಿಕತ್ವ ಪ್ರಕರಣಗಳನ್ನು ತಗ್ಗಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಎಲ್ಲ ಸರಪಂಚರು ಸೂಕ್ತ ಯೋಜನೆಯನ್ನು ರೂಪಿಸಬೇಕು ಎಂದು ಸಚಿವ ಗಿರಿರಾಜ್ ಸಿಂಗ್ ಕರೆ ನೀಡಿದರು.

ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version