ಸಿನಿ ಸುದ್ದಿ

ಆಲ್ ರೌಂಡರ್ ಸಹನಾಗೆ ಎಲ್ಲ ಕಲೆಯೂ ವರ

ಚಿತ್ರರಂಗಕ್ಕೆ ಬರಬೇಕೆಂದರೆ ನಟನೆ ಒಂದೇ ಅರ್ಹತೆಯಲ್ಲ. ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಯಾವ ಕಲೆ ನಮಗೆ ವರವಾಗುತ್ತದೆಯೋ ಹೇಳಲು ಬರುವುದಿಲ್ಲ. ಬಹುಮುಖ ಪ್ರತಿಭೆಗಳಿಗೆ ಮಾತ್ರವೇ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇದೇ ನಿಟ್ಟಿನಲ್ಲಿ ತಯಾರಾಗುತ್ತಿರುವ ಕಲಾವಿದೆ ಸಹನಾ.

Published

on

ಚಿತ್ರರಂಗಕ್ಕೆ ಬರಬೇಕೆಂದರೆ ನಟನೆ ಒಂದೇ ಅರ್ಹತೆಯಲ್ಲ. ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಯಾವ ಕಲೆ ನಮಗೆ ವರವಾಗುತ್ತದೆಯೋ ಹೇಳಲು ಬರುವುದಿಲ್ಲ. ಬಹುಮುಖ ಪ್ರತಿಭೆಗಳಿಗೆ ಮಾತ್ರವೇ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇದೇ ನಿಟ್ಟಿನಲ್ಲಿ ತಯಾರಾಗುತ್ತಿರುವ ಕಲಾವಿದೆ ಸಹನಾ.
ಸಹನ ಮೂಲತಃ ಕುಂದಾಪುರದವರು. ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್. ಸಹನಾ ಅವರ ತಂದೆ ಒಬ್ಬ ಖ್ಯಾತ ಫೋಟೊಗ್ರಾಫರ್. ಚಿಕ್ಕಂದಿನಲ್ಲಿ ಅಪ್ಪನ ಜತೆ ಫೋಟೊ ಶೂಟ್‍ಗೆ ಹೋಗುತ್ತಿದ್ದ ಸಹನಾ ಅವರಿಗೆ, ಕ್ಯಾಮೆರಾ ಮುಂದೆ ಹೇಗೆ ಪೋಸ್ ಕೊಡಬೇಕು. ಗ್ಲಾಮರ್ ಲೋಕ ಹೇಗಿರುತ್ತದೆ ಎಂಬ ಪರಿಚಯವಾಗಿತ್ತು. ಓದಿನಲ್ಲಿ ಮೆರಿಟ್ ವಿದ್ಯಾರ್ಥಿನಿಯಾಗಿದ್ದ ಸಹನಾಗೆ ತಾನು ಯಾವಾಗ ಫ್ಯಾಷನ್ ಲೋಕಕ್ಕೆ ಕಾಲಿಡುತ್ತೇನೋ ಎಂಬ ತುಡಿತ ಇತ್ತು ಅಪ್ಪ ಅಮ್ಮನ ಬಲವಂತಕ್ಕೆ ಕಟ್ಟುಬಿದ್ದು ಓದು ಮುಂದುವರಿಸಿದರು.
ಎಂಜಿನಿಯರಿಂಗ್ ಪೂರೈಸಿರುವ ಅವರು ಸದ್ಯ ಸಾಫ್ಟ್‍ವೇರ್ ದಿಗ್ಗಜ ಎಚ್.ಪಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಫ್ಯಾಷನ್ ಮೋಹ ಇನ್ನಷ್ಟು ಹೆಚ್ಚಾಗಿದೆ.
ಫ್ಯಾಷನ್ ಫೋಟೊಗ್ರಫಿಗೆಂದು ಹೋಗುತ್ತಿದ್ದ ಸಹನಾ ಅವರಿಗೆ ತಾವ್ಯಾಕೆ ಫ್ಯಾಷನ್ ಡಿಸೈನರ್ ಆಗಬಾರದೆಂಬ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾಡಿದರು. ನೋಡುಗರಿಂದ ವ್ಯಕ್ತವಾದ ಮೆಚ್ಚುಗೆ ಅವರ ಹುರುಪನ್ನು ಇನ್ನಷ್ಟು ಹೆಚ್ಚಿಸಿತು. ಪರಿಣಾಮವಾಗಿ ಅವರು ಫ್ಯಾಷನ್ ಡಿಸೈನರ್ ಆಗಬೇಕೆಂಬ ಕನಸು ಮೊಳೆಯಿತು. ಬ್ಯುಸಿ ಶೆಡ್ಯೂಲ್‍ನಲ್ಲಿ ಬಿಡುವಿದ್ದಾಗ ಸಹನಾ ಅವರು ತಮ್ಮ ಡಿಸೈನ್‍ಗಳ ಬಗ್ಗೆ ಹೆಚ್ಚುಆಸ್ಥೆ ವಹಿಸುತ್ತಾರೆ.
ಪ್ರತಿ ನಿಮಿಷವನ್ನೂ ಹೇಗೆ ಬಳಸಿಕೊಳ್ಳುವುದು ಎಂಬ ಹೊಸ ಆಲೋಚನೆಯಲ್ಲೇ ತೊಡಿಗಿರುವ ಅವರು ವಾರದಲ್ಲಿ ಸಿಗುವ ಎರಡು ದಿನ ರಜೆಯಲ್ಲಿ ತಮ್ಮ ಡಿಸೈನ್ ವರ್ಕ್‍ಗಳ ಬಗ್ಗೆ ಆಸಕ್ತಿ ವಹಿಸಿ, ವಸ್ತುಪ್ರದರ್ಶನಗಳನ್ನು ಏರ್ಪಡಿಸುತ್ತಾರೆ.
“ಸಾಫ್ಟ್‍ವೇರ್ ಎಂಜಿನಿಯರ್ ಆದ ಕಾರಣ ಸಮಯ ಹೆಚ್ಚು ಸಿಗುವುದಿಲ್ಲ. ವೀಕೆಂಡ್‍ಗಳಲ್ಲಿ ಸ್ನೇಹಿತರು, ಸಹೋದ್ಯೋಗಿಗಳು ಮನಶಾಂತಿಗಾಗಿ ಔಟಿಂಗ್ ಮೊದಲಾದ ಕಡೆ ಹೋಗುತ್ತಾರೆ. ಆದರೆ, ನನಗೆ ಡಿಸೈನಿಂಗ್‍ನಲ್ಲೇ ಹೆಚ್ಚು ಮನಶಾಂತಿ ಸಿಗುತ್ತದೆ,” ಎಂದು ಅವರು ಹೇಳುತ್ತಾರೆ.

ಸಂಗೀತದಲ್ಲೂ ಸೈ

ಸಹನಾ ಅವರು ಗಾಯಕಿಯೂ ಹೌದು. ಸೃಶ್ರಾವ್ಯವಾಗಿ ಹಾಡುವ ಸಹನಾ ಅವರು ಒಂದು ಮ್ಯೂಸಿಕ್ ಆಲ್ಬಂಗಾಗಿ ಹಾಡಿದ್ದಾರೆ. ಜತೆಗೆ ಆ ವಿಡಿಯೊದಲ್ಲಿ ಮುಖ್ಯ ಪಾತ್ರಧಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಹಾಡುವುದು ಅವರಲ್ಲಿ ಅಡಗಿರುವ ಒಂದು ಗುಪ್ತ ಪ್ರತಿಭೆಯೂ ಹೌದು.

ಮಿಸ್ ಉತ್ತರ ಕರ್ನಾಟಕ

ಫ್ಯಾಷನ್ ಲೋಕದಲ್ಲಿ ಆಸಕ್ತಿ ಇದ್ದರಿಂದ ಸಹನಾ ಅವರು ಸಿಲ್ವರ್ ಸ್ಟಾರ್ ಎಂಬ ಸಂಸ್ಥೆಯೊಂದಕ್ಕೆ ಸೇರಿ ರ್ಯಾಂಪ್ ವಾಕ್, ಮೊದಲಾದ ಕಲೆಗಳನ್ನು ಕರಗತ ಮಾಡಿಕೊಂಡರು. ರಾಜ್ಯ ಮಟ್ಟದ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದ ಅವರಿಗೆ ಮಿಸ್ ಉತ್ತರ ಕರ್ನಾಟಕ ಎಂಬ ಕೀರ್ತಿಯೂ ಲಭ್ಯವಾಗಿದೆ.

ಮಗಳ ಬಗ್ಗೆ ಹೆಮ್ಮೆ

ಪ್ರಾರಂಭದಲ್ಲಿ ಮಗಳು ಫ್ಯಾಷನ್ ಲೋಕ ಸೇರುವುದನ್ನು ಒಲ್ಲದ ಸಹನಾರ ಪೋಷಕರು ಓದಿನ ಬಗ್ಗೆ ಗಮನ ವಹಿಸುವಂತೆ ತಿಳಿ ಹೇಳಿದ್ದರು. ಯಾವಾಗ ಸಹನಾ ಅವರು ಕೆಲಸದ ಜತೆಗೆ ಫ್ಯಾಷನ್‍ಅನ್ನು ಒಂಧು ಭಾಗವಾಗಿ ತೆಗೆದುಕೊಂಡು ಆಸಕ್ತಿಯಿಂದ ಕೆಲಸ ಮಾಡಲು ಪ್ರಾರಂಭಿಸಿದರೋ ಆಗ ಮಗಳ ಬಗ್ಗೆ ಪೋಷಕರಿಗೆ ಹೆಮ್ಮೆ ಅನಿಸಿದೆ. ತಮ್ಮ ಮಗಳ ಸಾಧನೆ ಬಗ್ಗೆ ಅವರು ಈಗಲೂ ಖುಷಿಪಡುತ್ತಾರೆ.

ನಟನೆ ಅವಕಾಶ ಬಂದರೆ ಬಿಡಲ್ಲ

ಸಹನಾ ಅವರಿಗೆ ನಟನೆಯ ಕಲೆಯೂ ತಕ್ಕಮಟ್ಟಿಗೆ ಗೊತ್ತಿದೆ. ಫ್ಯಾಷನ್, ಸಂಗೀತ, ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಗುರುತು ಮೂಡಿಸಿರುವ ಸಹನಾ ಅವರು ನಟನೆಯ ಅವಕಾಶಕ್ಕಾಗಿ ಕಾಯುತ್ತಿದ್ದು, ಚಾನ್ಸ್ ಸಿಕ್ಕರೆ ಅದರಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸುವ ಭರವಸೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version