ರಾಜಕೀಯ

ಮೈತ್ರಿ ಸರ್ಕಾರ ಹೆಚ್ಚುದಿನ ಉಳಿಯೋದಿಲ್ಲ : ಬಿ.ಎಸ್.ವೈ

Published

on

ಸುದ್ದಿದಿನ ಡೆಸ್ಕ್ : 104 ಜನ ಶಾಸಕರಿರುವ ನಾವು ಪ್ರತಿಪಕ್ಷದಲ್ಲಿ ಕೂತಿದ್ದೇವೆ, 37 ಶಾಸಕರಿರುವ ಜೆಡಿಎಸ್ ಅಧಿಕಾರದಲ್ಲಿದೆ, ಕಾಂಗ್ರೆಸ್-ಜೆಡಿಎಸ್ ಒಳಜಗಳದಿಂದ ಕಳೆದ 4 ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಆರೋಪಿಸಿದರು.

ಕಮಿಶನ್ ಏಜೆಂಟರಂತೆ ಈ ಸರ್ಕಾರ ನಡೆಯುತ್ತಿದ್ದು, 8 ರಿಂ 10% ಕಮಿಶನ್ ಕೊಡದೇ ಬಿಲ್ ಪಾಸ್ ಮಾಡಲ್ಲ ಅಂತಾ ಸಚಿವರೇ ಹೇಳ್ತಿದ್ದಾರೆ. ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರವಿದೆ, 84 ತಾಲ್ಲೂಕುಗಳನ್ನ ಬರಪೀಡಿತ ಅಂತಾ ಘೋಷಣೆ ಮಾಡಿದ್ದಾರೆ. ಮಾಜಿ ಸಚಿವ ಎ ಮಂಜು ಹಾಸನದ ಭೂಹಗರಣದ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಗುಡುಗಿದರು.

ಮೈತ್ರಿ ಸರ್ಕಾರ ಹೆಚ್ಚುದಿನ ಉಳಿಯೋದಿಲ್ಲ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲ, ಯಾರ ಗಮನಕ್ಕೂ ತಾರದೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ್ದರಿಂದ ಕಳೆದ 4 ದಿನಗಳಿಂದ ಡಾ. ಜಿ ಪರಮೇಶ್ವರ್ ಮಾತಾಡ್ತಿಲ್ಲ ಡಾ. ಜಿ ಪರಮೇಶ್ವರ್ ಅವ್ರಿಗೂ ಅಸಮಾಧಾನವಾಗಿದೆ.
ಆಪರೇಶನ್ ಕಮಲ ಅಂತಾ ಸಿಎಂ ಕುಮಾರಸ್ವಾಮಿ ಮಾತಾಡ್ತಾರೆ, ಆದ್ರೆ ಸ್ವತಃ ಕುಮಾರಸ್ವಾಮಿ ಅವ್ರೆ ನಮ್ಮ ಶಾಸಕ ಸುಭಾಶ್ ಗುತ್ತೇದಾರ್ ಅವ್ರಿಗೆ ಜೆಡಿಎಸ್ ಸೇರುವಂತೆ ಕರೆದಿದ್ದಾರೆ.‌ ಸಚಿವ ಸ್ಥಾನದ‌‌‌‌ ಆಮಿಶವನ್ನು ಹಲವು ಶಾಸಕರಿಗೆ ಒಡ್ಡಿದ್ದಾರೆ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಕಿಂಗ್ ಪಿನ್ ಬಗ್ಗೆ ಮಾತಾಡ್ತಾರೆ. ಆದರೆ ಕುಮಾರಸ್ವಾಮಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡ್ತಾರೆ.‌ಈ ಸರ್ಕಾರ ಹೆಚ್ಚು ದಿನ ಬಾಳತ್ತೆ ಎಂದು ನನಗೆ ಅನಿಸೋದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷದಲ್ಲಿ ನಮಗೆ ಉಸಿರುಗಟ್ಟಿಸುವ ಪರಿಸ್ಥಿತಿ ಇದೆ ಎನ್ನುತ್ತಾರೆ.‌ ಸರ್ಕಾರ ಬಿದ್ದ ಬಳಿಕ ನಾವೇನು ಮಾಡಬೇಕು ಎಂದು ಪ್ರಮುಖರೆಲ್ಲ ಕುಳಿತು ಚರ್ಚೆ ಮಾಡ್ತೇವೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version