ದಿನದ ಸುದ್ದಿ

ಆರೋಗ್ಯ ಇಲಾಖೆ ಸಿಬಂಧಿ ವರ್ಗಾವಣೆಗೆ ಅನುಮತಿ

Published

on

ಸುದ್ದಿದಿನ,ಬೆಂಗಳೂರು: 2024- 25 ನೇ ಸಾಲಿನ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆಯಂತೆ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕ ನಾಗರೀಕ ಸೇವಾ ವೈದ್ಯಾಧಿಕಾರಿಗಳ ಹಾಗೂ ಇತರೆ ಸಿಬ್ಬಂದಿಗಳ ವರ್ಗಾವಣೆ ಕಾಯಿದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಗಳಡಿ, ಈ ಕಾಯ್ದೆಯಡಿ ರಚಿಸಲಾದ ನಿಯಮಾವಳಿಗಳನ್ನು ಪಾಲಿಸುವ ಷರತ್ತಿಗೆ ಒಳಪಡಿಸಿ ಸರ್ಕಾರ ಅನುಮತಿ ನೀಡಿದೆ.

ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಪ್ರಸ್ತಾಪಿತ ವರ್ಗಾವಣೆ ಪ್ರಕ್ರಿಯೆ ಕೈಗೊಂಡು ಜುಲೈ 31ರೊಳಗೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version