ಲೈಫ್ ಸ್ಟೈಲ್
ರೆಸಿಪಿ | ಆಲೂಗಡ್ಡೆ ಕಚೋರಿ ಮಾಡೋದು ಹೇಗೆ ಗೊತ್ತಾ..!
ಬೇಕಾಗುವ ಪದಾರ್ಥಗಳು
ಕಾಲು ಕೆ.ಜಿ. ಮೈದಾಹಿಟ್ಟು, ಅರೆದ ಜೀರಿಗೆ, ಸ್ವಲ್ಪ ಗರಂ ಮಸಾಲ, ಎರಡು ಚಮಚ ತುಪ್ಪ, ನಿಂಬೆರಸ, ತುಂಡು ಶುಂಠಿ, ಉಪ್ಪು, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಎರಡು ಚಮಚ ಹುಳಿ ಮೊಸರು, ಒಂದು ಟೀ ಚಮಚ ಧನಿಯ ಪುಡಿ, ಚಿಟಿಕೆ ಅಡಿಗೆ ಸೋಡಾ, ಉಪ್ಪು (ತುಂಬಲು), ನಾಲ್ಕು ಆಲೂಗಡ್ಡೆಗಳು, ಮೆಣಸಿನಪುಡಿ, ನೂರು ಗ್ರಾಂ ಬೇಯಿಸಿದ ಬಟಾಣಿ, ಕಾಲು ಚಮಚ ಸಾಸಿವೆ, ನಾಲ್ಕು ಹಸಿಮೆಣಸಿನಕಾಯಿ (ಕೊಚ್ಚಿದ).
ಇದನ್ನೂ ಓದಿ | ಶಿವಣ್ಣನ 125 ನೇ ಸಿನೆಮಾ ‘ವೇದ’ ಪೋಸ್ಟರ್ ರಿಲೀಸ್..!
ತಯಾರಿಸುವ ವಿಧಾನ
ಆಲೂಗಡ್ಡೆಗಳನ್ನು ಕುದಿಸಿ ಸಿಪ್ಪೆ ಸುಲಿಡಿ. ಮೈದಾ, ಉಪ್ಪು ಹಾಗೂ ಸೋಡಾ ಬೆರೆಸಿ ತುಪ್ಪ ತಿಕ್ಕಿ ಹಿಟ್ಟಿಗೆ ಕಡೆದ ಮೊಸರನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ . ಒಂದು ಟೇಬಲ್ ಚಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿಸಿ, ಶುಂಠಿ, ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು , ಧನಿಯಪುಡಿ, ಗರಂ ಮಸಾಲ, ಜೀರಿಗೆ, ನಿಂಬೆರಸ, ಶುಂಠಿ, ಮೆಣಸಿನಪುಡಿ ಇವೆಲ್ಲ ತುಂಬು ಸಾಮಾನುಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಒಲೆಯ ಮೇಲಿನಿಂದ ಕೆಳಗಿಳಿಸಿ. ಮಿಶ್ರಣವನ್ನು ವಿಭಾಗಿಸಿಕೊಂಡು ಒಂದೊಂದೇ ಕಚೇರಿಯನ್ನು ಬೇಯಿಸಿ ತೆಗೆಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243