/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಕಾಂಗ್ರೆಸ್ ಗೆ ಎಚ್.ಡಿ.ಕೆ ಅನಿವಾರ್ಯ : ಅಂಬರೀಶ್

Published

on

ಸುದ್ದಿದಿನ, ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಶಾಸಕರ ಅಸಮಧಾನ ವಿಚಾರವಾಗಿ ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮಾತನಾಡುತ್ತಾ,‌’ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅನಿವಾರ್ಯ ಕುಮಾರಸ್ವಾಮಿಗೆ ಕಾಂಗ್ರೆಸ್ ಅನಿವಾರ್ಯವಲ್ಲ” ಎಂದು ಹೇಳಿದರು.

ಸರ್ಕಾರ ಬೀಳಿಸಿದ್ರೆ ಮುಂದೇನಾಗುತ್ತೆ ಅನ್ನೋದನ್ನ ಕಾಂಗ್ರೆಸ್ ನಾಯಕರು ಯೋಚಿಸಬೇಕು. ಕುಮಾರಸ್ವಾಮಿ ಬಿಟ್ಟರೆ ಸರ್ಕಾರ ಉಳಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಸಿದರು ರೆಬಲ್ ಸ್ಟಾರ್.

ಅಭಿಮಾನಿ ರಫೀಕ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಅಂಬಿ, ಮಾತಿಗೂ ಮುಂಚೆ ಭಾವುಕರಾದರು.ನನ್ನ ಕಂಡ್ರೆ ರಫೀಕ್ ಗೆ ಬಹಳ ಪ್ರೀತಿ. ನನ್ನ ಮಗ ರಫೀಕ್ ಕುಟುಂಬಸ್ಥರನ್ನ ಮಾತನಾಡಿಸಿಕೊಂಡು ಬರಬೇಕು ಎಂದಿದ್ದ.ನನ್ನ ಮಗನ‌‌ ಮನಸ್ಸಿಗೂ ರಫೀಕ್ ತಾಕಿದ್ದಾನೆ. ಜನ ಸಂಪಾದಿಸೋದೆ ಜೀವನದ ಗುರಿ. ಮೊನ್ನೆ ನನಗೆ ಕರೆ ಮಾಡಿ ನನ್ನ ಸಿನೆಮಾ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದ
ನಾನು ಅವ್ನಿಗೆ ಊಟ ಬಟ್ಟೆ ಕೊಟ್ಟಿಲ್ಲ ಆದರೆ ಆದ್ರೂ ನನ್ನ ಮೇಲೆ ಬಹಳ ಪ್ರೀತಿ.ರಫೀಕ್ ಸಾವಿನಿಂದ ನನಗೆ ಬಹಳ ಬೇಜಾರಾಗಿದೆ.
ನಾನು ಚುನಾವಣೆಗೆ ನಿಲ್ಲಲಿಲ್ಲ ಎಂದು‌ ಬಹಳ ನೊಂದಿದ್ದ. ಅವನ‌ ಕುಟುಂಬಕ್ಕೆ ಸಹಾಯ ಮಾಡ್ತೀನಿ.ಅದಕ್ಕೆ ಪ್ರಚಾರ ಬೇಡ. ಸರ್ಕಾರದಿಂದ ಸೌಲಭ್ಯ ಸಿಗುವ ಹಾಗೇ ಮಾಡ್ತೀನಿ‌ ಎಂದರು.

ಅಂಬರೀಶ್ ನಿವೃತ್ತಿ ಬಳಿಕ ಮಂಡ್ಯ ಕಾಂಗ್ರೆಸ್ ನಾವಿಕ‌ನಿಲ್ಲದ ದೋಣಿ ವಿಚಾರವಾಗಿ, ಜವಹಾರ್‌ಲಾಲ್ ನೆಹರು ಸತ್ತಮೇಲೆ ಯಾರು ನಾಯಕರು ಹುಟ್ಟಿಕೊಳ್ಳಲಿಲ್ವ ಹಾಗೇ ಮಂಡ್ಯಕ್ಕೂ ನಾಯಕರು ಬರ್ತಾರೆ.ರಮ್ಯಾ ಸಮಾಜಿಕ ಜಾಲಾಯಾಣ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು,ಅವ್ರು ಸೊಸಿಯಲ್ ಮಿಡಿಯಾ ದ ಮುಖ್ಯಸ್ಥೆಯಾಗಿದ್ದಾರೆ.ಅವ್ರ ಕೆಲಸವೇ ಎದುರಾಳಿ ಗಳ‌‌ಕಾಲೆಳೆದು ನಮ್ಮ ಪಕ್ಷವನ್ನ ಮೇಲೆತ್ತೋದು. ಅಭಿಷೇಕ್ ನಾನಿರುವವರೆಗೂ ರಾಜಕೀಯಕ್ಕೆ ಬರಲ್ಲ.ನನಗೆ ಪಕ್ಷದ ಬಗ್ಗೆ ಅಸಮಾಧಾನ ಇಲ್ಲ.ಮಂಡ್ಯಕ್ಕೆ‌‌ ಸಾಕಷ್ಟು ಅಭಿವೃದ್ಧಿ ಕೆಲಸ‌ಮಾಡಿದ್ದೇನೆ.ನನಗೆ ಗೊತ್ತಿಗೆ ಏನು ಮಾಡಿದ್ದೇನೆ ಎಂದರು. ಜಿಲ್ಲೆಗೆ ಮಹಿಳಾ ಯುನಿವರ್ಸಿಟಿ, ಕೆರಗೋಡು ರಸ್ತೆ ಹೀಗೆ ಸಾಕಷ್ಟು ಕೆಲಸ ಮಾಡಿದ್ದೇನೆ.‌ಮಂಡ್ಯ ಅಮೃತ ಮಹೋತ್ಸವ, ರಾಜ್ ಕುಮಾರ್ ಕಾರ್ಯಕ್ರಮ, ಎಸ್.ಎಂ.ಕೃಷ್ಣ ಕಾರ್ಯಕ್ರಮ, ಮೆಡಿಕಲ್ ಕಾಲೇಜು ಆಸ್ಪತ್ರೆ, ಶಾಲಾ ಕಾಲೇಜು ಹೀಗೆ ಹಲವಾರು ಮಹತ್ವದ ಕಾರ್ಯ ಮಾಡಿದ್ದೇನೆ.
ಹೀಗಿರುವವರು ಇದರಲ್ಲಿ ನನ್ನಂತಹ ಒಂದು ಕಾರ್ಯಕ್ರಮ ಮಾಡಲಿ ನೋಡೋಣ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version