ದಿನದ ಸುದ್ದಿ
ಸ್ವಾತಂತ್ರ್ಯ-ಸಮಾನತೆಯನ್ನುಳಿಸುವುದು ಸಹಜೀವನ : ಡಾ.ಬಿ.ಆರ್.ಅಂಬೇಡ್ಕರ್
ಕೆಲವರು ಪ್ರಜಾಪ್ರಭುತ್ವವನ್ನು ಸಮಾನತೆ ಮತ್ತು ಸ್ವಾತಂತ್ರ್ಯದ ಜೊತೆ ಸಮೀಕರಿಸುತ್ತಾರೆ. ನಿಜ, ಪ್ರಜಾಪ್ರಭುತ್ವದ ಅತ್ಯಂತ ತೀವ್ರ ಕಾಳಜಿ ಎಂದರೆ ಸಮಾನತೆ ಮತ್ತು ಸ್ವಾತಂತ್ರ್ಯವೇ, ಆದರೆ ಈ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಶಾಶ್ವತವಾಗಿ ಉಳಿಸುವುದು ಯಾವುದು ಎಂಬುದು ಮುಖ್ಯವಾದ ಪ್ರಶ್ನೆ.
ಕೆಲವರ ಪ್ರಕಾರ ಪ್ರಭುತ್ವದ ಕಾನೂನು, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ರಕ್ಷಿಸುತ್ತವೆ. ಆದರೆ ಇದು ಸತ್ಯದ ಸಂಗತಿಯಲ್ಲ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನುಳಿಸುವುದು ಸಹಜೀವನ. ಫ್ರೆಂಚ್ ಕಾಂತಿಕಾರರು ಯಾವುದನ್ನು ಸಹೋದರ ಭಾವ (fraternity) ಎಂದು ಕರೆದರೋ ಅದು. ಈ ಸಹ ಬ್ರಾತೃತ್ವ ಎಂಬ ಪದ ಸಮಪರ್ಕವಾದ ಪದವಲ್ಲ. ಈ ಬುದ್ಧನ ‘ಮೈತ್ರಿ’ ಎಂಬ ಪದವೇ ಅದಕ್ಕಿಂತ ಹೆಚ್ಚು ಸಮರ್ಪಕವಾದದ್ದು.
ಈ ಸಹಬ್ರಾತೃತ್ವವಿಲ್ಲದ ಸ್ವಾತಂತ್ರ್ಯವು ಸಮಾನತೆಯನ್ನು ನಾಶಮಾಡಿಬಿಡುತ್ತದೆ. ಅಥವಾ ಸಹಭ್ರಾತೃತ್ವವಿಲ್ಲದ ಸಮಾನತೆಯು ಸ್ವಾತಂತ್ರ್ಯವನ್ನು ನಾಶಮಾಡಿಬಿಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಮಾನತೆಯಿಂದ ಸ್ವಾತಂತ್ರ್ಯವೂ, ಸ್ವಾತಂತ್ರ್ಯದಿಂದ ಸಮಾನತೆಯೂ ನಾಶವಾಗದಿರಲು ಈ ಎರಡರ ಮೂಲದಲ್ಲಿರುವ ಸಹಬ್ರಾತೃತ್ವವೇ ಕಾರಣ. ಆದುದರಿಂದ ಸಹಭ್ರಾತೃತ್ವವು ಪ್ರಜಾಪ್ರಭುತ್ವದ ಮೂಲ.
–ಡಾ.ಬಿ.ಆರ್.ಅಂಬೇಡ್ಕರರ ‘ ಹಿಂದೂಧರ್ಮದ ಒಗಟುಗಳು ‘ ಪುಸ್ತಕದಿಂದ ಈ ಬರಹ ಆಯ್ಕೆಮಾಡಿಕೊಳ್ಳಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243