ದಿನದ ಸುದ್ದಿ
ಆರ್ಯರದು ಜೂಜುಕೋರ ಜನಾಂಗ : ಡಾ.ಬಿ.ಆರ್. ಅಂಬೇಡ್ಕರ್
- ಡಾ.ಬಿ.ಆರ್. ಅಂಬೇಡ್ಕರ್
ಆರ್ಯರದು ಜೂಜುಕೋರ ಜನಾಂಗ. ಆರ್ಯರ ಆರಂಭದ ಘಟ್ಟದಿಂದಲೇ ಜೂಜು ಒಂದು ಶಾಸ್ತ್ರವಾಗಿ ಬೆಳೆದುಬಂದಿದೆ.ಆರ್ಯರು ಆ ಬಗೆಗೆ ತಾಂತ್ರಿಕ ಪರಿಕಲ್ಪನೆಗಳು ಹುಟ್ಟುಹಾಕಿದ್ದರು. ಅವರು ಇತಿಹಾಸವನ್ನು ಕೃತ, ತ್ರೇತ, ದ್ವಾಪರ ಮತ್ತು ಕಲಿ ಎಂದು ನಾಲ್ಕು ಯುಗಗಳನ್ನಾಗಿ ವಿಂಗಡಿಸಿದ್ದರು. ಆದರೆ, ಇವು ವಾಸ್ತವವಾಗಿ ಅರ್ಯರು ಜೂಜಿನಲ್ಲಿ ಬಳಸುತ್ತಿದ್ದ ದಾಳಗಳ ಹೆಸರುಗಳು. ಅತ್ಯಂತ ಅದೃಷ್ಟದಾಯಕವಾದ ದಾಳವೆಂದರೆ ಕೃತ.
ದುರದೃಷ್ಟ ತರುವ ದಾಳವೇ ಕಲಿ. ತ್ರೇತ ಮತ್ತು ದ್ವಾಪರ ಇವೆರಡರ ನಡುವಿನ ದಾಳಗಳು. ಆರ್ಯರ ಕಾಲದಲ್ಲಿ ಜೂಜಿಗೆ ಒಡ್ಡುತ್ತಿದ್ದ ಪಣ ಕೂಡ ತೀರಾ ದೊಡ್ಡದು. ರಾಜ್ಯಗಳನ್ನೂ ತಮ್ಮ ಪತ್ನಿಯರನ್ನೂ ಅವರು ಪಣಕ್ಕಿಡುತ್ತಿದ್ದುದುಂಟು. ನಳ ಮಹಾರಾಜ ರಾಜ್ಯವನ್ನೇ ಪಣಕ್ಕಿಟ್ಟು ಸೋತ. ಪಾಂಡವರು ಮತ್ತೂ ಮುಂದೆ ಹೋದರು.
ಅವರು ತಮ್ಮ ರಾಜ್ಯದ ಜೊತೆಗೆ ಪತ್ನಿ ದ್ರೌಪದಿಯನ್ನೂ ಪಣಕ್ಕಿಟ್ಟು ಎರಡನ್ನೂ ಸೋತರು. ಆರ್ಯರಲ್ಲಿ ಜೂಜು ಕೇವಲ ಸಿರಿವಂತರ ಕ್ರೀಡೆಯೇನಾಗಿರಲಿಲ್ಲ. ಇದು ಬಹುತೇಕ ಎಲ್ಲ ಜನರ ದೌರ್ಬಲ್ಯವಾಗಿತ್ತು. ಈ ವ್ಯಸನ ಅದೆಷ್ಟು ತೀವ್ರವಾಗಿ ಹಬ್ಬಿತ್ತೆಂದರೆ ಧರ್ಮಶಾಸ್ತ್ರದ ಕತೃಗಳೆಲ್ಲ ಇದನ್ನು ರಾಜ್ಯದ ಕಾನೂನುಗಳ ಮೂಲಕ ಮಟ್ಟಹಾಕಬೇಕೆಂದು ರಾಜರುಗಳಿಗೆ ಒತ್ತಿ ಒತ್ತಿ ಹೇಳಿದರು.
–ಡಾ.ಬಿ.ಆರ್.ಅಂಬೇಡ್ಕರರ ‘ ಹಿಂದೂ ಧರ್ಮದ ಒಗಟುಗಳು’ ಪುಸ್ತಕದಿಂದ ಈ ಬರಹ ಆಯ್ಕೆ ಮಾಡಿಕೊಳ್ಳಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243