ದಿನದ ಸುದ್ದಿ

ಟೋಲ್‌ಗೇಟ್ ನಲ್ಲಿ ಆಂಬುಲೆನ್ಸ್ ಪಲ್ಟಿ : ಭೀಕರ ಅಪಘಾತದಲ್ಲಿ ನಾಲ್ವರ ಸಾವು

Published

on

ಸುದ್ದಿದಿನ,ಕಾರವಾರ : ಜಿಲ್ಲೆಯ ಹೊನ್ನಾವರದಿಂದ ರೋಗಿಯನ್ನು ಚಿಕಿತ್ಸೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಟೋಲ್ ಗೇಟ್‌ ನಲ್ಲಿ ಪಲ್ಟಿಯಾಗಿ ಟೋಲ್ ಗೇಟ್ ನಲ್ಲಿರುವ ಕಂಬಕ್ಕೆ ಅಪ್ಪಳಿಸಿದೆ , ಅಪಘಾತದ ತೀವ್ರತೆಗೆ ನಾಲ್ವರು ಮೃತಪಟ್ಟಿದ್ದಾರೆ ,

ಈ ಭೀಕರ ಅಪಘಾತದಲ್ಲಿ ಟೋಲ್ ಸಿಬ್ಬಂದಿಗಳೂ ಗಂಭೀರ ಗಾಯಗೊಂಡಿದ್ದಾರೆ.

ಗಜಾನನ ನಾಯ್ಕ ಎಂಬವರನ್ನು ಸಂಬಂಧಿಕರು ಉಡುಪಿ ಜಿಲ್ಲೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಈ ದುರಂತ ನಡೆದಿದೆ, ಆಂಬ್ಯುಲೆನ್ಸ್ ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಸೇರಿದ್ದಾಗಿದೆ,

ಮೃತರನ್ನು ಹಾಡಗೇರಿಯ ಮಂಜುನಾಥ ನಾಯ್ಕ , ಲೋಕೇಶ್ ನಾಯ್ಕ , ಜ್ಯೋತಿ ನಾಯ್ಕ ಮತ್ತು ಬಳಕೂರಿನ ಗಜಾನನ ನಾಯ್ಕ ಎಂದು ಗುರುತಿಸಲಾಗಿದೆ,

ಆಂಬುಲೆನ್ಸ್ ವೇಗವಾಗಿ ಬಂದು ಪಲ್ಟಿಯಾಗುವ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version