ಸಿನಿ ಸುದ್ದಿ
ಸ್ಯಾಂಡಲ್ ವುಡ್ ಗೆ ‘ಅಮರ್’ ಆಗಿ ಎಂಟ್ರಿ ಕೊಟ್ಟ ಅಂಬಿ ಪುತ್ರ
ಸುದ್ದಿದಿನ,ಬೆಂಗಳೂರು: ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ನಟನೆಯ ‘ಅಮರ್’ ಚೊಚ್ಚಲ ಸಿನಿಮಾದ ಮಹೋರ್ಥವು ಜೆಪಿ ನಗರದ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ಈ ಸಿನೆಮಾವನ್ನು ಮೈನಾ,ಮಾಸ್ತಿಗುಡಿ ಸಿನಿಮಾದ ನಿರ್ದೇಶಕ ನಾಗಶೇಖರ್ ನಿರ್ದೇಶದ ಜತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ.
ಸಿನಿಮಾ ಮುಹೂರ್ತದಲ್ಲಿ ರೆಬಲ್ ಸ್ಟಾರ್ ಫ್ಯಾಮಿಲಿ ಹಾಗೂ ಚಿತ್ರತಂಡ ಭಾಗಿಯಾಗಿತ್ತು. ನಂತರ ಅಮರ್ ಚಿತ್ರದ ಪತ್ರೀಕಾಗೋಷ್ಠಿಯಲ್ಲಿ ಮಾತನಾಡಿದ ಅಂಬರೀಶ್ ಸಂದೇಶ್ ಪ್ರೋಡಕ್ಷನ್ ನಲ್ಲಿ ಅಮರ್ ಚಿತ್ರ ಮೂಡಿ ಬರ್ತಿರೋದು ಖುಷಿ ಇದೆ.ಮಗನ ಸಿನಿಮಾಗೆ ಎಲ್ಲರು ಹರಸಿ ಆಶೀರ್ವದಿಸಿ ಎಂದರು.
ಸಂದೇಶ್ ನಾಗರಾಜ್ ಪುತ್ರಿ ಬೃಂದಾ ಜಯರಾಮ್ ಕ್ಲಾಪ್ ಮಾಡಿ ಸಿನಿಮಾಗೆ ಚಾಲನೆ ನೀಡಿದರು.ಚಿತ್ರದ
ಫಸ್ಟ್ ಸೀನ್ ನಲ್ಲಿ ಹೂ ಕೊಟ್ಟು ಪ್ರಪೋಜ್ ಮಾಡಿದ ದೃಶ್ಯವನ್ನು ಚಿತ್ರೀಕರಿಸಲಾಯಿತು.
ಅಂದಹಾಗೆ ಈ ಸಿನಿಮಾಗೆ ತಾನ್ಯಾ ಹೋಪ್ ಎಂಬ ನವ ನಟಿ ಸಿನಿಮಾದಲ್ಲಿ ಅಭಿಷೇಕ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.