ದಿನದ ಸುದ್ದಿ

ಅಮಿತ್ ಶಾ ಕಾರ್ಯಕ್ರಮ | ಪಾಸ್ ತಗೋಳೋಕೆ ಪತ್ರಕರ್ತರ ವೈಯಕ್ತಿಕ ಮಾಹಿತಿ ಏಕೆ ?

Published

on

ಸುದ್ದಿದಿನ ಡೆಸ್ಕ್ | ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯಕ್ರಮದ ಪಾಸ್ ಪಡೆದುಕೊಳ್ಳಲು ಪತ್ರಕರ್ತರು ವ್ಯಯಕ್ತಿಕ ವಿವರ, ಆಧಾರ್, ವೋಟರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ನಕಲು ಪ್ರತಿ ನೀಡಬೇಕೆಂದು ಚೆನ್ನೈ ಬಿಜೆಪಿ ಶರತ್ತು ವಿಧಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಚೆನ್ನೈನ ವಿಬಿಜಿ ಗೋಲ್ಡನ್ ಬೀಚ್ ರೆಸಾರ್ಟ್ ನಲ್ಲಿ 9ರಂದು ಬೂತ್ ಮಟ್ಟದ ಕಾರ್ಯಕರ್ತರ ಸಭೆ ಆಯೋಜಿಸಿದೆ. ಈ ಕಾರ್ಯಕ್ರಮದ ವರದಿ ಮಾಡುವ ಪತ್ರಕರ್ತರಿಗೆ ಬಿಜೆಪಿ ಟ್ವಿಟರ್ ಮೂಲಕ ಫಾರ್ಂ ಬಿಡುಗಡೆ ಮಾಡಿದೆ. ಅರ್ಜಿಯೊಂದಿಗೆ ಜೆರಾಕ್ಸ್ ನೀಡುವಂತೆ ಸೂಚಿಸಿದೆ. ಅಲ್ಲದೇ ಈ ಅರ್ಜಿಯಲ್ಲಿ ವ್ಯಕ್ತಿಯ ಪ್ರಾಥಮಿಕ ಮಾಹಿತಿಯನ್ನು (ಹೆಸರು, ವಾಹನ ಸಂಖ್ಯೆ, ಸಂಸ್ಥೆಯ ಹೆಸರು ಸಂಪಾದಕ ಹೆಸರು, ಸಂಸ್ಥೆ ಕಚೇರಿ ವಿಳಾಸ) ಕೋರಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಆದರೆ, ಗಮನಿಸಬೇಕಾದ ಒಂದು ವಿಚಾರವೆಂದರೆ ಅರ್ಜಿಯಲ್ಲಿ ಎಲ್ಲೂ ಕೂಡ ಮಾಹಿತಿ ನೀಡಿಕೆ “ಐಚ್ಛಿಕ” (optional) ಎಂದು ತಿಳಿಸಿಲ್ಲ. ಮಾಧ್ಯಮ ಮಾನ್ಯತೆ ಪತ್ರ ಇಲ್ಲದವರು ಸಂಒಅದಕ ಸಹಿಯುಳ್ಳ ಸಂಸ್ಥೆ ಗುರುತಿನ ಚೀಟಿ ತರುವುದು ಕಡ್ಡಾಯಗೊಳಿಸಿದೆ.

ಬಿಜೆಪಿಯ ಈ ನಡೆಯನ್ನು ಪತ್ರಕರ್ತರು ಟ್ವಿಟರ್.ನಲ್ಲಿ ಖಂಡಿಸಿದ್ದು, ಮಿರರ್ ನೌ ಪತ್ರಿಕೆಯ ಕರೆಸ್ಪಾಂಡೆಂಟ್ ಪ್ರಮೋದ್ ಮಾಧವ್ ಅವರು ಇಸ್ರೋ ನಿಯಮದಂತೆ ಮಾಧ್ಯಮ ಮಾನ್ಯತಾ ಪ್ರಮಾ ಪತ್ರ ಹೊಂದಿದ ಪತ್ರಕರ್ತರು ಮಾತ್ರ ಅವಕಾಶ ಎಂಬಂತಿದೆ ಟ್ವಿಟ್ ಮಾಡಿದ್ದಾರೆ.

ಇಂಡಿಪೆಂಡೆಂಟ್ ಜರ್ನಲಿಸ್ಟ್ ಸಾವುಕ್ಕು ಶಂಕರ್, ಇದೇನು ರಾಜಕೀಯ ಕಾರ್ಯಕ್ರಮವೋ ಅಥವಾ ಪಿಡಿಎಸ್ ವಿತರಣೆ ಸಮಾರಂಭವೋ ಎಂದು ಟೀಕಿಸುದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986615401

Leave a Reply

Your email address will not be published. Required fields are marked *

Trending

Exit mobile version